ಅರೆಭಾಷೆ - ಭಾಷಾ ಸೌಹಾರ್ಧ ಸಂಭ್ರಮ
(ಅಕಾಡೆಮಿಯ ನೂತನ ಅಧ್ಯಕ್ಷರು ಮತ್ತು ಸದಸ್ಯರುಗಳ ಅಭಿನಂದನಾ ಸಮಾರಂಭ)
ದಿನಾಂಕ 22.01.2018 ರಂದು ದುರ್ಗಾ ಪರಮೇಶ್ವರಿ ಕಲಾ ಮಂದಿರ, ಸುಳ್ಯ ಇಲ್ಲಿ ಅರೆಭಾಷೆ ಭಾಷಾ ಸೌಹಾರ್ದ ಸಂಭ್ರಮ ಹಾಗೂ ಅಕಾಡೆಮಿಯ ನೂತನ ಅಧ್ಯಕ್ಷರು ಮತ್ತು ಸದಸ್ಯರುಗಳ ಅಭಿನಂದನಾ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಪಿ.ಸಿ.ಜಯರಾಮ ಇವರು ವಹಿಸಿದ್ದರು, ಸನ್ಮಾನ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮನಾಥ ರೈ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. “ಭಾಷಾ ಸೌಹಾರ್ದದಿಂದ ಮತೀಯ ಸಾಮರಸ್ಯ ಸಾಧ್ಯತೆ” ಎಂದು ಸಚಿವರು ಹೇಳಿದರು. ಸುಳ್ಯ ತಾಲೂಕು ಅಕ್ಷರ ದಾಸೋಹ ಅಧಿಕಾರಿಗಳಾದ ಶ್ರೀ ಚಂದ್ರಶೇಖರ ಪೇರಾಲು ಇವರು “ಅರೆಭಾಷೆ ಮತ್ತೆ ಸಂಸ್ಕೃತಿ” ಬಗ್ಗೆ ವಿಚಾರ ಮಂಡಿಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಕೊಲ್ಯದ ಗಿರೀಶ್, ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದ, ಕುಕ್ಕೇ ಶ್ರೀ ಸುಬ್ರಮಣ್ಯ< ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ
ಶ್ರೀ ನಿತ್ಯಾನಂದ ಮುಂಡೋಡಿ, ಸುಳ್ಯದ ಗೌಡ ಯುವ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ ಮಡಪ್ಪಾಡಿ ಇವರು ಮುಖ್ಯ ಅತಿಥಿಗಳಾಗಿ ಭಾಗವಿಸಿದ್ದರು. ಅಕಾಡೆಮಿ ರಿಜಿಸ್ಟ್ರಾರ್ ಶ್ರೀ ಉಮರಬ್ಬ ರವರು ಉಪಸ್ಥಿತರಿದ್ದರು.
ಅಕಾಡೆಮಿ ಎಲ್ಲಾ ಸದಸ್ಯರಿಗೆ ಗುರುತಿನ ಚೀಟಿ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಬಹುಭಾಷಾ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು, ಮರಗೋಡು ಅರುಣೋದಯ ಕಲಾತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಅಕಾಡೆಮಿ ಪ್ರಕಟಿಸಿದ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಶ್ರೀ ಶಶಿಧರ ಮಾವಿನಕಟ್ಟೆ ರವರು
ಕಾರ್ಯಕ್ರಮದ ನಿರೂಪಣೆ ಮಾಡಿದರು, ರಿಜಿಸ್ಟ್ರಾರ್ ಶ್ರೀ ಉಮರಬ್ಬ ನವರು ಸ್ವಾಗತಿಸಿದರು, ಸದಸ್ಯರಾದ ಶ್ರೀ ಮಾಧವಗೌಡ ನವರು ವಂದನಾರ್ಪಣೆ ಮಾಡಿದರು.
ಬೆಳಗ್ಗೆ 9.30 ಗಂಟೆಗೆ ಕಾರ್ಯಕ್ರಮ ಫ್ರಾರಂಭವಾಗಿ ಸಂಜೆ 6.00 ಗಂಟೆಗೆ ಮುಕ್ತಾಯವಾಯಿತು.
“ಜಿಲ್ಲಾ ಮಟ್ಟದ ಆಟಿ ನಾಟಿ ಕೂಡುಕೂಟ


ದಿನಾಂಕ 22.07.2018 ರ ಭಾನುವಾರದಂದು ಶ್ರೀ< ಕುಕ್ಕೇರ ಪಳಂಗಪ್ಪನವರ ಗದ್ದೆ ದೇವಸ್ತೂರು ಗ್ರಾಮ, ಕಾಲೂರೂ, ಮಡಿಕೇರಿ ಇಲ್ಲಿ<
“ಜಿಲ್ಲಾ ಮಟ್ಟದ ಆಟಿ ನಾಟಿ ಕೂಡು ಕೂಟ”ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕುಕ್ಕೇರ ಕುಟುಂಬದ ಪಟ್ಟೆದಾರರಾದ ಶ್ರೀ ಕುಕ್ಕೇರ ತಮ್ಮಯ್ಯ ನವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಕಾಡೆಮಿ ಅಧ್ಯಕ್ಷರಾಧ ಶ್ರೀ ಪಿ.ಸಿ.ಜಯರಾಮ ನವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ “ಕಾಳು ಹೆಕ್ಕುವುದು” “ಕೆಸರು ಗದ್ದೆ ಓಟ” “ಸಸಿ ತೆಗೆಯುವ ಸ್ಫರ್ಧೆ” “ನಾಟಿ ನೆಡುವ ಸ್ಪರ್ಧೆ” “ಅಡಿಕೆ ಹಾಳೆಯಲ್ಲಿ ಕುಳ್ಳಿರಿಸಿ ಎಳೆಯುವ ಸ್ಫರ್ದೇ ದಂಪತಿಗಳಿಗೆ” “ಅಂಬುಗಾಯಿ” “ಹಗ್ಗಜಗ್ಗಾಟ” “ಥ್ರೋಬಾಲ್” “ವಾಲಿಬಾಲ್” ಮುಂತಾದ ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಯಿತು. ಸಮಾರೋಪ ಸಮಾರಂಭದಲ್ಲಿ ಮಡಿಕೇರಿ ವಿಧಾನಸಭಾಕ್ಷೇತ್ರ ಶಾಸಕರಾದ ಶ್ರೀ ಮಂಡೆಪಂಡ ಅಪ್ಪಚ್ಚುರಂಜನ್ ನವರು ಕೆಸರು ಗದ್ದೆಯಲ್ಲಿ ಹಿಂದೆ ಹಿಂದೆ ನಡೆಯುವ ಸ್ಫರ್ಧೆಗೆ ಚಾಲನೆ ಮಾಡಿದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೊಂಬಾರನ ಜಿ. ಬೋಪಯ್ಯ ನವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಭಾಷೆ, ಸಂಸ್ಕೃತಿ, ಜನಾಂಗಗಳ ಏಳಿಗೆಗಾಗಿ ಶ್ರಮಿಸಿರುವ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಅರೆಭಾಷೆ ಸಾಹಿತ್ಯ ಅಕಾಡೆಮಿಗಳ ಬೆಳವಣಿಗೆಗೆ ಎಲ್ಲಾ ರೀತಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಜಿಲ್ಲಾಧಿಕಾರಿ,ಅಬಕಾರಿ ಇಲಾಖೆ, ಕೋಲಾರ ಹಾಗೂ ರಾಜ್ಯ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿರುವ ಶ್ರೀಮತಿ ನಂಗಾರು ಸುಮಿತ ಲಿಂಗರಾಜು, ಶ್ರೀಮತಿ ಯಾಲದಾಳು ಪದ್ಮಾವತಿ, ಶ್ರೀ ಮುದ್ದಂಡ ರಾಯ್ ತಮ್ಮಯ್ಯ, ಶ್ರೀ ಪುದಿಯತಂಡ ಸುಭಾಷ್ ಸೋಮಯ್ಯ, ಶ್ರೀ ಕುಕ್ಕೇರ ಪ್ರದೀಪ್, ಶ್ರೀ ಕುಕ್ಕೇರ ಲಕ್ಷ್ಮಣ, ಶ್ರೀ ಕುಂಬಗೌಡನ ಎಂ
ಅರವಿಂದ, ಹಾಗೂ ಅಕಾಡೆಮಿ ಸದಸ್ಯರಾದ ಶ್ರೀ ಕೆ.ಟಿ.ವಿಶ್ವನಾಥ್, ಮಾಧವ ಗೌಡ, ಎಂ.ಹೆಚ್.ಸುರೇಶ್, ಶ್ರೀಮತಿ ತಿಮಲೇಶ್ವರಿ, ಶ್ರೀ ಬೇಕಲ್ ದೇವರಾಜು, ಶ್ರೀಮತಿ ಕಡ್ಲೇರಾ ತುಳಸಿಮೋಹನ್, ಶ್ರೀ ಕಾನೆಹಿತ್ಲು ಮೊಣ್ಣಪ್ಪ, ಶ್ರೀ ಕುಂಬುಗೌಡನ
ಪ್ರಸನ್ನಹಾಗೂ ಅಕಾಡೆಮಿ ಮಾಜಿ ಸದಸ್ಯರಾದ ಶ್ರೀ
ತುಂತಜೆ ವೆಂಕಟೇಶ್, ಶ್ರೀ ಕುಡೆಕಲ್ ಸಂತೋಷ್
ಇವರು ಉಪಸ್ಥತರಿದ್ದರು.
ಕಾರ್ಯಕ್ರಮ ನಿರೂಪಣೆ ಶ್ರೀ ಪಟ್ಟಡ
ಶಿವಕುಮಾರ್ ರವರು ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿಗಳಿಗೆ
ನೆನಪಿನ ಕಾಣಿಕೆಯಾಗಿ ಅಕಾಡೆಮಿ ಪ್ರಕಟಿಸಿದ
ಪುಸ್ತಕ ನೀಡಿ ಗೌರವಿಸಲಾಯಿತು.

ರಾಷ್ಟೀಯ ಅರೆಬಾಸೆ ವಿಚಾರ ಸಂಕಿರಣ
ಅರೆಬಾಸೆ ಲಿಪಿ, ವ್ಯಾಕರಣ ಮತ್ತು ಭಾಷಾ<
ಸಬಲೀಕರಣ

ಪ್ರೊ. ಕೋಡಿ ಕುಶಾಲಪ್ಪಗೌಡರ ಕೊಡುಗೆ
ಹಾಗೂ

ಕೋಡಿಯವರ ಸಾಹಿತ್ಯ ಅವಲೋಕನ

****

ದಿನಾಂಕ 29.07.2018ರ ಭಾನುವಾರದಂದು ಕೆ.ವಿ.ಜಿ ಲಾ ಕಾಲೇಜು ಸಭಾಂಗಣ, ಸುಳ್ಯ ಇಲ್ಲಿ ಅರೆಬಾಸೆ ಲಿಪಿ, ವ್ಯಾಕರಣ ಮತ್ತು ಭಾಷಾ ಸಬಲೀಕರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪ್ರಥಮ ಅಧ್ಯಕ್ಷರಾದ ಶ್ರೀ ಎನ್.ಎಸ್.ದೇವಿಪ್ರಸಾದ್, ಸಂಪಾಜೆ ಇವರು ದೀಪ ಬೆಳಗಿಸಿ
ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಅಕಾಡೆಮಿ ಅಧ್ಯಕ್ಷರಾದ ಶ್ರೀ ಪಿ.ಸಿ.ಜಯರಾಮ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ನಿತ್ಯಾನಂದ ಮುಂಡೋಡಿ ಅಧ್ಯಕ್ಷರು, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ವ್ಯವಸ್ಥಾಪನಾ ಸಮಿತಿ ಇವರು ಭಾಗವಹಿಸಿದ್ದರು, ಪ್ರೊ. ಕೆ. ಕುಶಾಲಪ್ಪಗೌಡ, ಭಾಷಾ ವಿಜ್ಞಾನಿ, ಸಾಹಿತಿ ಇವರು ದಿವ್ಯ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯರಾದ ಶ್ರೀ ಎ.ಕೆ.ಹಿಮಕರ, ಶ್ರೀ ವಿಶ್ವನಾಥ್ ಕೆ.ಟಿ, ಶ್ರೀ ಚಿದಾನಂದ ಬೈಲಾಡಿ, ಶ್ರೀಮತಿ ಕಡ್ಲೇರ ತುಳಸಿಮೋಹನ್, ಶ್ರೀಮತಿ
ತಿರುಮಲೇಶ್ವರಿ, ಶ್ರೀ ದಿನೇಶ್ ಹಾಲೆಮಜಲು, ಶ್ರೀ
ಬಾರಿಯಂಡ ಜೋಯಪ್ಪ, ಶ್ರೀ ಕುಂಬುಗೌಡನ
ಪ್ರಸನ್ನ, ಶ್ರೀ ಕಾನೆಹಿತ್ಲು ಮೊಣ್ಣಪ್ಪ, ಶ್ರೀ ಬೇಕಲ್
ದೇವರಾಜು, ಸುರೇಶ್ ಎಂ.ಹೆಚ್, ಹಾಗೂ ರಿಜಿಸ್ಟ್ರಾರ್ ಶ್ರೀ
ಉಮರಬ್ಬ ಇವರು ಉಪಸ್ಥಿತರಿದ್ದರು.
ಅರೆಭಾಷೆ ಲಿಪಿ, ವ್ಯಾಕರಣ ಮತ್ತು ಸಬಲೀಕರಣ ಬಗ್ಗೆ
ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ.ಎನ್
ಸುಕುಮಾರಗೌಡ, ಶಿಕ್ಷಣ ಸಿದ್ಧಾಂತಿ, ಮಕ್ಕಳ ಮಂಟಪ,
ಪುತ್ತೂರು ಇವರು ವಹಿಸಿದ್ದರು. ಡಾ.
ಪುರುಷೋತ್ತಮ ಬಿಳಿಮಲೆ, ಪ್ರಾಧ್ಯಾಪಕರು,
ಕನ್ನಡ ಅಧ್ಯಯನ ಪೀಠ ಜವಾಹರಲಾಲ್ ನೆಹರು
ವಿಶ್ವವಿದ್ಯಾನಿಲಯ, ನವದೆಹಲಿ ಹಾಗೂ ಡಾ. ರಾಮಸ್ವಾಮಿ
ಚಲ್ಲಪ್ಪಗೌಡ ಸಂದರ್ಶಕ ಪ್ರಾಧ್ಯಾಪಕರು,ಕರ್ನಾಟಕ
ಕೇಂದ್ರೀಯ ವಿಶ್ವವಿದ್ಯಾನಿಲಯ , ಗುಲ್ಬರ್ಗ ಇವರು
ವಿಚಾರ ಮಂಡನೆ ಮಾಡಿದರು.
ಪ್ರೊ.ಕೋಡಿ ಕುಶಾಲಪ್ಪಗೌಡರ ಬರಹ
ಅವಲೋಕನ-ಭಾಷೆ, ಅಧ್ಯಯನ, ಅಭಿವೃಕ್ತಿ ಇದರ
ಬಗ್ಗೆ ನಡೆದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು
ಸಾಹಿತಿ, ಸಂಶೋಧಕರು ಆದ ಡಾ. ಬಿ.ಎ.ವಿವೇಕ ರೈ
ಇವರು ವಹಿಸಿದ್ದರು. ಸಾಹಿತಿ ಹಾಗೂ ಸಂಶೋಧಕರು
ಆದ ಡಾ. ಕೆ. ಚಿನ್ನಪ್ಪಗೌಡ, ಸಾಹಿತಿ ಹಾಗೂ ವಿದ್ವಾಂಸರು
ಆದ ಡಾ. ಹರಿಕೃಷ್ಣ ಭರಣ್ಯ, ಶ್ರೀಮತಿ ಪ್ರತಿಭಾ
ನಂದಕುಮಾರ್, ಸಾಹಿತಿ ಹಾಗೂ ಪತ್ರಕರ್ತರು ಇವರು
ವಿಚಾರ ಮಂಡನೆ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ
ಅತಿಥಿಗಳು ಹಾಗೂ ಗಣ್ಯ ವ್ಯಕ್ತಿಗಳಿಗೆ ನೆನಪಿನ
ಕಾಣಿಕೆಯಾಗಿ ಅಕಾಡೆಮಿ ಪ್ರಕಟಿಸಿದ ಪುಸ್ತಕ ನೀಡಿ

ಗೌರವಿಸಲಾಯಿತು. ಹಾಗೂ ಅಕಾಡೆಮಿಯಿಂದ
ಶಿಬಿರಾರ್ಥಿಗಳಿಗೆ ನೋಟ್ ಪ್ಯಾಡ್, ಪೆನ್, ಪೈಲು ಹಗೂ
ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
ಬೆಳಿಗ್ಗೆ 9.30 ಗಂಟೆಗೆ ಕಾರ್ಯಕ್ರಮ
ಫ್ರಾರಂಭವಾಗಿ ಸಂಜೆ 4.00 ಗಂಟೆಗೆ
ಮುಕ್ತಾಯವಾಯಿತು.
News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.