ಅರೆಬಾಸೆ ಸಂಸ್ಕøತಿಲಿ ಕಿಡ್ಡಾಸ ಹಬ್ಬ - 04.03.2019
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿವತಿಯಿಂದ ಗಾಳಿಬೀಡಿನ ಸ್ನೇಹಿತರ ಯುವಕ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಅಡ್ಕದ ಬಾಣೆ ಎಂಬಲ್ಲಿ ಅರೆಬಾಸೆ ಸಂಸ್ಕøತಿಲಿ ಕಿಡ್ಡಾಸ ಹಬ್ಬ ಕಾರ್ಯಕ್ರಮವನ್ನು ದಿನಾಂಕ 04.03.2019 ರಂದು ಏರ್ಪಡಿಸಲಾಗಿತ್ತು.
ಬೆಳಿಗ್ಗೆ ಕಳಸದ ಮೆರವಣಿಗೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ನಿವೃತ್ತ ಡಿವೈಎಸ್‍ಪಿ ಶ್ರೀ ಯಲದಾಳು ಡಿ.ಕೇಶವಾನಂದ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಭಾಷೆ ಬೆಳೆಯಲು ಎಲ್ಲರ ಸಹಕಾರ ಅತ್ಯಗತ್ಯ. ಭಾಷೆ ಬೆಳೆಸುವ ಸಲುವಾಗಿ ಆಕಾಶವಾಣಿಯಲ್ಲಿ ಅರೆಭಾಷೆ ವಾರ್ತೆ ಆರಂಭಿಸಿದ್ದು, ಇದಕ್ಕೆ ಅಕಾಡೆಮಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸಮಾರೋಪ ಸಮಾರಂಭದಲ್ಲಿ ಶಾಸಕ ಕೊಂಬಾರನ ಬೋಪಯ್ಯ ಮಾತನಾಡಿ ಭಾಷಾ ಬೆಳವಣಿಗೆಯೊಂದಿಗೆ ಸಾಮರಸ್ಯವಿರಬೇಕು. ಮಾತೃ ಭಾಷೆಯನ್ನು ಮರೆಯಬಾರದು ಇತರ ಭಾಷೆಗಳನ್ನೂ ಗೌರವಿಸಬೇಕು. ಅಕಾಡೆಮಿ ಸ್ಥಾಪನೆಯಾದ ಬಳಿಕ ಸಾಕಷ್ಟು ಉತ್ತಮ ಕಾರ್ಯಕ್ರಮಗಳಾಗಿವೆ. ಭಾಷೆಯೊಂದಿಗೆ ಕಲೆ, ಸಂಸ್ಕøತಿಯನ್ನು ಉಳಿಸಿ, ಬೆಳೆಸುವ ಕಾರ್ಯವಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಪಿ.ಸಿಜಯರಾಮ ರವರು ಮಾತನಾಡಿ, ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಪ್ರತಿ ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗುವುದು, ನಾವು ನಮ್ಮ ಭಾಷೆಯನ್ನು ಮನೆಯಿಂದಲೇ ಬೆಳೆಸಬೇಕು ಇತರರಿಗೂ ಕಲಿಸುವುದರೊಂದಿಗೆ ಭಾಷಾ ಸಾಮರಸ್ಯ ಮೂಡಿಸಬೇಕು ಎಂದು ಹೇಳಿದರು.
ಸುಳ್ಯದ ನೆಹರು ಸ್ಮಾರಕ ಪದವಿ ಕಾಲೇಜಿನ ಪ್ರಾಧ್ಯಾಪಕ ಸಂಜೀವ ಕುದ್ಪಾಜೆ ಇವರು ಕಿಡ್ಡಾಸ ಹಬ್ಬದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಗಳಾಗಿ ಗಾಳಿಬೀಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಬದಲೇರ ರಾಣಿ ಮುತ್ತಣ್ಣ, ಪಂಚಾಯಿತ್ ಸದಸ್ಯರಾದ ಶ್ರೀ ಸುಬಾಷ್ ದಂದ್ರ ಅಳ್ವ ಎಂ.ಡಿ, ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷರಾದ ಶ್ರೀ ಕೋಳುಮುಡಿಯನ ಆರ್.ಅನಂತಕುಮಾರ್, ಗಾಳಿಬೀಡು ದವಸಭಂಡಾರ ಅಧ್ಯಕ್ಷರಾದ ಶ್ರೀ ಕೊಂಬಾರನ ಪಿ.ಲಿಂಗರಾಜು, ಮಹಿಳಾಸಮಾಜ ಗಾಳಿಬೀಡು ಇದರ ಅಧ್ಯಕ್ಷರಾದ ಶ್ರೀಮತಿ ಅಚ್ಚಪಟ್ಟೀರ ಜಿ.ಕವಿತಾ ಇವರು ಭಾಗವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮೀಣ ಕ್ರೀಡೆಗಳು ಜನಮನ ಸೂರೆಗೊಂಡವು. ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ನೀರು ಚೆಂಬಿನ ಓಟ, ಕೋಳಿ ಜಗಳ, ಬಕ್ಕೆಟ್ಟಿಗೆ ಚೆಂಡು ಹಾಕುವುದು. ಹಾಗೂ ಅರೆಭಾಷೆ ಜನಪದ ಹಾಡುಗಳನ್ನು ಹಾಡುವುದು. ಪುಟಾಣಿ ಮಕ್ಕಳಿಗೆ ಕೈ ಕಟ್ಟಿ ಬಿಸ್ಕೆಟ್ ಕಚ್ಚಿ ತಿನ್ನುವ ಸ್ಪರ್ಧೆ, ಗಾದೆ ಮಾತು (ಕುಳಿತಲ್ಲೆ ಬರೆದು ವೇದಿಕೆಯಲ್ಲಿ ಹೇಳುವುದು)ಪುರುಷರಿಗೆ ರಬ್ಬರ್ ಬಿಲ್ಲಿನಿಂದ ಕಲ್ಲು ಹೊಡೆದು ಬಲೂನಿಗೆ ಒಡೆಯುವುದು, ಗೋಣಿ ಚೀಲದ ಓಟ, ಕೋಳಿಜಗಳ, ಕಾಲ್ ಕಟ್ಟಿ ಓಡುವುದು. ದಂಪತಿಗಳಿಗೆ ಅಡಿಕೆ ಹಾಳೆಯಲ್ಲಿ ಕುಳ್ಳಿರಿಸಿ ಎಳೆಯುವುದು. ಅರೆಭಾಷಿಕರ ಪದ್ಧತಿಯ ರುಮಾಲು ಸುತ್ತುವ ಸ್ಪರ್ಧೆ ಗಳನ್ನು ಏರ್ಪಡಿಸಲಾಗಿ ಎಲ್ಲವರೂ ಭಾಗವಹಿಸಿ ಮನರಂಜಿಸಿದರು.
News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.