ಅರೆಭಾಷೆ ಜನಾಂಗದವರದ ಹಬ್ಬ ಹರಿದಿನ
ವಿವಿದೆಡೆಯಲ್ಲಿ ಏಕತೆನ ಹೊಂದಿರುವ ಭಾರತ ದೇಶಲಿ ಬ್ಯಾರೆ ಬ್ಯಾರೆ ತರದ ಜಾತಿ ಜನಾಂಗ ಧರ್ಮದವ್ ಒಳೋ.ಒಂದೊಂದು ಜಾತಿ,ಜನಾಂಗಕ್ಕೆ ಅದರದೇ ಆದ ಭಾಷೆ ಸಂಸ್ಕೃತಿ ಪದ್ದತಿ ಉಟ್ಟು.ಅಂತಹದರಲ್ಲಿ ಕೊಡಗ್ ಮತ್ತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿರವ ಅರೆಭಾಶೆ ಜನಾಂಗದ ಅರೆಭಾಷೆ ಸಂಸ್ಕೃತಿ,ಪದ್ದತಿ,ಆಚಾರ-ವಿಚಾರಗ ವಿಶೇಷ ಆಗಿಟ್ಟು..

ಶತಮಾನದಷ್ಟ್ ಹಳೆಯದಾಗಿರವ,ಇತಿಹಾಸ ಇರ್ವ ಅರೆಭಾಷೆ ಸಂಸ್ಕೃತಿ ಸಿರಿವಂತ ಸಂಸ್ಕೃತಿ,ಕನ್ನಡ ಪ್ರಬೇಧ ಅರೆಭಾಷೆ ಲಿಂಗವಚನ ವ್ಯವಸ್ಥೆ ಉತ್ತರ ಡ್ರಾವಿಡ ವಿಭಾಗದ ನಂತರದ ಹಂತಕ್ಕೆ ಸೇರುಟ್ಟುತಾ ಹೇಳ್ವೆ.ಪೂರ್ವವಲಯದ ಅರೆಭಾಶೆ ಜನಾಂಗರ ಕನ್ನಡದ ಒಂದ್ ಪ್ರಭೇದನೇ ಅಂತ ಮಾತಾಡ್ವೇ...

ಅರೆಭಾಶೆ ಜನಾಂಗ ಕನ್ನಡತಾ ಕರಿತ್ತಿದ್ದ ಭಾಷೆ ಈಗ ಅರೆಭಾಷೆತಾ ಆವುಟು.ದಕ್ಷಿಣಕನ್ನಡ ಮತ್ತ್ ಕೊಡಗ್ ಜಿಲ್ಲೆಲಿ ಗೌಡರ್ ಹೆಚ್ಚಿಗೆ ಹೊಂದಿಕೊಟ್ಟುತಾ ಹೇಳ್ವೆ.ಪೂರ್ವವಲಯದ ಅರೆಭಾಶೆ ಜನಾಂಗರ್ ಹೆಚ್ಚಿಗೆ ಇದ್ದ್ ದಕ್ಷಿಣಕನ್ನಡಲಿ ಅರೆಭಾಷೆ ಮತ್ತೆ ತುಳು ಮಾತಾಡ್ವೆ.ದಕ್ಷಿಣ ಕನ್ನಡ ಜಿಲ್ಲೆನಾ ಸಂಸ್ಕೃತಿ ಮತ್ತೆ ಕೊಡಗ್ ನ ಸಂಸ್ಕೃತಿ,ಆಚರಣೆಗೆ ಹೆಚ್ಚುಕಮ್ಮಿ ಉಟ್ಟು ಅಲ್ಲಿ ಭೂತಾರಾಧನೆ,ಸುಗ್ಗಿಹಬ್ಬ ಹಿಂಗೆ ಆಚರಣೆ ಮಾಡ್ವೆ.

ದಕ್ಷಿಣ ಕನ್ನಡನಜಿಲ್ಲೆನ ಸಂಸ್ಕೃತಿ ಮತ್ತೆ ಕೊಡಗಿನ ಸಂಸ್ಕೃತಿ ಆಚರಣೆಯಲ್ಲಿ ವಿಭಿನ್ನತೆ ಉಟ್ಟು,ಅಲ್ಲಿ ಭೂತಾರಾಧನೆ,ಸುಗ್ಗಿ ಹಬ್ಬ ನಡೆಸಿವೆ,ಆದರೆ ಕೊಡಗ್ ಅರೆಭಾಶೆ ಜನಾಂಗರ ಸಂಸ್ಕೃತಿ ವೀಶೇಷದ್ದೇ.ಭಾಷೆ,ಸಂಗೀತ,ಕೊಣ್ತ,ಬಟ್ಟೆ,ಬಂಗಾರ,ಆಚಾರ ಎಲ್ಲಾ ವಿಭಿನ್ನ.ಕೊಡಗಿನವರ ಪಾಲಿಗೆ ಈ ಆಚಾರಗಳ್ ಬಂದದ್ ರಾಜವಂಶಸ್ತರಿಂದ.ಕೊಡಗಿನ ವೀರತನಕ್ಕಾಗಿ ಕೊಟ್ಟ ಒಡಿಕತ್ತಿ ಮತ್ತೆ ಕೋವಿ ಜನಾಂಗದ ಹೆಗ್ಗುರುತು.
ಧಾರ್ಮಿಕ ಮನೋಭಾವ ಇರ್ವ ಕೊಡಗ್ ನ ಜನ ಪ್ರತಿಯೊಂದು ಗ್ರಾಮಲೂ ಗ್ರಾಮ ದೇವತೆಗೆ ಪ್ರತಿಷ್ಠಾಪನೆ ಮಾಡಿಕಂಡ್ ಪೂಜಿಸ್ತಾ ಬಂದೊಳೋ.ಪ್ರತಿ ವರ್ಷ ನಿಗದಿತ ಸಮಯಲಿ ನಡೆವ ಗ್ರಾಮ ದೇವತೆ ಉತ್ಸವ ಗ್ರಾಮ ಗ್ರಾಮಗಳ ಜನರ ಒಗ್ಗಟ್ಟಿನ ಪ್ರತೀಕವಾಗಿಟ್ಟು.ಈ ಸಂದರ್ಭಲಿ ಎಲ್ಲಾ ಕಡೆಂದ ಜನ ಸಹ ಸೇರಿಕಂಡ್ ತಮ್ಮ ಇಷ್ಟಾರ್ಥ ಸಿದ್ದಿನ ಪಡ್ ಕ್ಂಬುದು ನಡ್ದ್ ಬಂದ ಕ್ರಮವುಟ್ಟು.ಇನ್ ಕೊಡಗ್ ನ ಹಬ್ಬಗಳ್ ಲಿ ಮುಖ್ಯವಾದ್ ಕಾವೇರಿ,ಸಂಕ್ರಮಣ,ಕೈಲ್ ಮೂರ್ತ ಮತ್ತೆ ಹುತ್ತರಿ ಹಬ್ಬ.ಇನ್ ದಕ್ಷಿಣ ಕನ್ನಡ ಭಾಗದಲ್ಲಿ ಕೊಲ ಕಟ್ಟುವುದು,ಸುಗ್ಗಿ ಹಬ್ಬ ವಿಶೇಷ,ದೀಪಾವಳಿ ಸಹಾ ಜೋರಾಗಿ ಆಚರಿಸಿವೆ.

ಹೇಸರೇ ಹೇಳುವಂತೆ ಅರೆಭಾಶೆ ಜನಾಂಗತೇಳ್ರೆ ಭೂಮಿಯ ಒಡೆಯ. ಅರೆಭಾಶೆ ಜನಾಂಗವ್ ಎಲ್ಲಿಂದ ಬಂದವ್ ತಾ ಹೇಳಿಕೆ ಎಲ್ಲಿಯೂ ಸನಾ ಸರಿಯಾದ ಮಾಹಿತಿ ಇಲ್ಲೆ.ಆದರೆ ವಿಜಯನಗರ ಸಾಮ್ರಾಜ್ಯಲಿ,ಕೃಷ್ಣದೇವರಾಯ ಕಾಲಲ್ಲೇ ಅರೆಭಾಶೆ ಜನಾಂಗರ್ಗ ಇದ್ದೋ ತಾ ಚರಿತ್ರೆಯಿಂದ ತಿಳಿದು ಬಂದದೆ.

ಅಲ್ಲಿಂದ ಐಗೂರು ಸೀಮೆಗಾಗಿ ದಕ್ಷಿಣಕನ್ನಡ ಜಿಲ್ಲೆಲಿ ಹೆಚ್ಚಾಗಿದ್ದ ಗೌಡ ಜನಾಂಗವ್ರುನ ಕೊಡಗನ್ನು ಆಳ್ತ ಇದ್ದ ಹಾಲೇರಿ ರಾಜ ವಂಶಸ್ತದವು ಕರ್ಕಂಡ್ ಬಂದ್ ಇಲ್ಲಿ ಭೂಮಿನ ಉಂಬಳಿಯಾಗಿ ಜಮ್ಮಾತೇಳಿ ಕೊಟ್ ನೆಲಿಸಿಕೆ ಅವಕಾಶಮಾಡಿಕೊಟ್ಟಿರುವ ಬಗ್ಗೆ ಇತಿಹಾಸದಲ್ಲಿ ದಾಖಲೆ ಉಟ್ಟು.ಈ ಹಿನ್ನಲೆಯಲ್ಲಿ ಸಣ್ಣ ಜಿಲ್ಲೆ ಕೊಡಗ್ ಸೇರ್ದಂಗೆ ಎಲ್ಲಾ ಕಡೆಲೂ ಅರೆಭಾಶೆ ಜನಾಂಗದವು ಒಳೋ.. ಜನಜೀವನ ಮತ್ತೆ ವ್ಯವಸಾಯ
ಶ್ರಮ ಜೀವಿಗಳಾದ ಅರೆಭಾಷೆ ಜನಾಂಗದವರ ಮುಖ್ಯ ಕಸುಬ್ ಬ್ಯಾಸಾಯ ಮತ್ತೆ ತೋಟಗಾರಿಕೆ.ಕಣ್ಣಿಗೆ ನಿಲುಕದಂತೆ ಮೈಲುಗಟ್ಟಲೆ ವಿಸ್ತೀರ್ಣಲಿ ಮೈತಳ್ದಿರುವ ಕಾಫಿ,ಭತ್ತ,ಏಲಕ್ಕಿ,ರಬ್ಬರ್, ಕೊಕ್ಕೂ ಮತ್ತೆ ಅಡಿಕೆ ಹೊರಗಿನವುಕೆ ಈ ಎರಡ್ ಜಿಲ್ಲೆನ ಬಗ್ಗೆ ಅಭಿಮಾನ ಮೂಡಿಕೆ ಕಾರಣವಾಗುಟ್ಟು.

ಅರೆಭಾಸೆ ಸಂಸ್ಕೃತಿ ಮತ್ತೆ ಸಾಹಿತ್ಯ ಕಾರ್ಯವ್ಯಾಪ್ತಿ
ಅರೆಭಾಷೆ ಜನಾಂಗದವು ಕೊಡಗ್ ದಕ್ಷಿಣ ಕನ್ನಡದ ಬಹುತೇಕ ಕಡೆಲೂ ವಿಸ್ಥರಿಸಿಟ್ಟು .
ಮಂಗಳೂರು,ಉಳ್ಳಾಲ,ವಿಟ್ಲ,ಪುತ್ತೂರು,ಸುಳ್ಳ,ಮಡಿಕೇರಿಸೋಮವಾರಪೇಟೆ ವಿರಾಜಪೇಟೆ ಕೇರಳದ ಕಾಸರಗೋಡಿನವರಗೆ ಹರಡಿಟ್ಟು.
News and Events
Related Sites
  1. ಕನ್ನಡ ಮತ್ತು ಸಂಸ್ಕತಿ ನಿರ್ದೇಶನಾಲಯ
  2. ಕರ್ನಾಟಕ ಸರ್ಕಾರ
Home   |   About Arebhashe Academy   |   Events   |   Culture   |   Gallery   |   Contact Us
©Copyright 2018. Karnataka Arebhashe Academy. All rights reserved.