ಆಟಿ ಹಬ್ಬ 2018
ದಿನಾಂಕ 05.08.2018 ರ ಭಾನುವಾರದಂದು ಒಕ್ಕಲಿಗ ಗೌಡ ಸಮುದಾಯ ಭವನ, ತೆಂಕಿಲ, ಪುತ್ತೂರು ಇಲ್ಲಿ ಅಕಾಡೆಮಿವತಿಯಿಂದ ಅರೆಭಾಷೆ ಸಂಸ್ಕøತಿಗೆ ಸಂಬಂಧಿಸಿದ ಆಟಿ ಹಬ್ಬದ ಪ್ರಯುಕ್ತ “ಆಟಿ ಹಬ್ಬ 2018” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಶ್ರೀಮತಿ ಚಂದ್ರಕಲಾ ಸಿ.ಪಿ ಜಯರಾಂ ಇವರು ಉದ್ಘಾಟಿಸಿದರು. ಅಕಾಡೆಮಿ ಅಧ್ಯಕ್ಷರಾದ ಶ್ರೀ ಪಿ.ಸಿ.ಜಯರಾಮ ಇವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಸಂಜೀವ ಮಠಂದೂರು ಶಾಸಕರು, ಪುತ್ತೂರು ಮತ್ತು ಶ್ರೀಮತಿ ಪಿ.ಕೆ.ವಿದ್ಯಾರಾಣಿ ವಲಯ ಅರಣ್ಯಾಧಿಕಾರಿಗಳು, ಸಾಮಾಜಿಕ ಅರಣ್ಯ ಇಲಾಖೆ
ಪುತ್ತೂರು ಇವರು ಭಾಗವಹಿಸಿದ್ದರು. ‘ಸÀÀಮುದಾಯಗಳಿಗೆ ಪ್ರಾಚೀನ ಹಿನ್ನೆಲೆ ಇರುವಂತೆ ಭಾಷೆಗೂ ಹಿನ್ನೆಲೆ ಇದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೆ ಬೆಳೆದು ಬಂದಿದೆ. ಭಾಷೆಯನ್ನು ಬಿಟ್ಟು ಸಮುದಾಯವಿಲ್ಲ. ಸಮುದಾಯವನ್ನು ಬಿಟ್ಟು ಭಾಷೆಯಿಲ್ಲ, ಆದರೆ ಭಾಷೆಯ ಬೆಳವಣಿಗೆಯಾಗಬೇಕಾದರೆ ಅದು
ಸಮುದಾಯದ ಮಿತಿ ಮೀರಿ ಬೆಳೆಯಬೇಕು ಎಂದು ಶ್ರೀ ಪಿ.ಕೆ.ವಿದ್ಯಾರಾಣಿಯವರು ಹೇಳಿದರು.
ಮುಖ್ಯ ಭಾಷಣಗಾರರಾಗಿ ಭಾಗವಹಿಸಿದ ಶ್ರೀ ಸೀತಾರಾಮ ಕೇವಳ, ಪ್ರಾಂಶುಪಾಲರು, ವಿದ್ಯಾರಶ್ಮಿ ವಿದ್ಯಾಲಯ, ಸವಣೂರು, ಇವರು ಆಟಿ ಸಂಕಷ್ಟದ ಕಾಲ, ಕಾಲ ಬದಲಾದಂತೆ ಸಂಪ್ರದಾಯ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಮೂಲ ಸಂಪ್ರದಾಯ ಉಳಿಸುವ ಕೆಲಸ ಆಗಬೇಕು ಎಂದರು.

ಅರೆಭಾಷೆ ಗ್ರಾಮೀಣ ಸಂಸ್ಕøತಿಗೆ ಸಂಬಂದಿಸಿದಂತೆ ಬಾಟಲಿಗೆ ನೀರು ತುಂಬಿಸುವುದು, ಅಡಕೆ ಹಾಳೆಯಲ್ಲಿ ಕುಳಿತು ಎಳೆಯುವುದು, ಮೇಣದ ಬತ್ತಿ ಉರಿಸುವುದು, ಅಡಕೆ ಹಾಳೆಯಲ್ಲಿ ಕಸೂತಿ ಸ್ಪರ್ಧೆ, ಚೆನ್ನೆಮಣೆ ಆಟ, ಗೋಣಿಚೀಲ ಓಟ, ಸ್ಪರ್ಧೆಗಳನ್ನು ನಡೆಸಲಾಯಿತು. ಕಷಾಯ, ಜ್ಯೂಸ್, ಖಾರ ತಿಂಡಿ, ಸಿಹಿ ತಿಂಡಿ, ಪಾಯಸ ಇವುಗಳ ತಯಾರಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು, ಭಾಗವಹಿಸಿದ ಆತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಅಕಾಡೆಮಿ ಪ್ರಕಟಿಸಿದ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಅಕಾಡೆಮಿ ರಿಜಿಸ್ಟ್ರಾರ್ ಶ್ರೀ ಉಮರಬ್ಬ, ಸದಸ್ಯರಾದ ಶ್ರೀ ಯತೀಶ್ ಕುಮಾರ್ ಗೌಡ, ಶ್ರೀ ಮಾಧವ ಗೌಡ, ಶ್ರೀಮತಿ ತಿರುಮಲೇಶ್ವರಿ,
ಶ್ರೀ ಕೆ.ಟಿ.ವಿಶ್ವನಾಥ, ಶ್ರೀ ಎ.ಕೆ.ಹಿಮಕರ, ಶ್ರೀ ಸುರೇಶ್ ಎಂ.ಹೆಚ್, ಶ್ರೀ ಕುಂಬುಗೌಡನ ಪ್ರಸನ್ನ, ಶ್ರೀ ಕಾನೆಹಿತ್ಲು ಮೊಣ್ಣಪ್ಪ, ಶ್ರೀ ದಿನೇಶ್ ಹಾಲೆಮಜಲುರವರು ಉಪಸ್ಥಿತರಿದ್ದರು. ಬೆಳಗ್ಗೆ 9.00 ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ಸಂಜೆ 4 ಗಂಟೆಗೆ ಮುಕ್ತಾಯವಾಯಿತು.

ಅರೆಭಾಷೆ ಸಂಸ್ಕøತಿಲಿ ಆಟಿ ಉತ್ಸವ 2018

ದಿನಾಂಕ 12.08.2018 ರ ಭಾನುವಾರದಂದು ಶ್ರೀ ವೆಂಕಟೇಶ್ವರ ಸಭಾ ಭವನ, ಹಾಲೆಮಜಲು ಇಲ್ಲಿ “ಅರೆಭಾಷೆ ಸಂಸ್ಕೃತಿಲಿ ಆಟಿ ಉತ್ಸವ 2018” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ಜತ್ತಪ್ಪ ಮಾಸ್ತರ್ ಚಿಲ್ತಡ್ಕ ರವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು, ಅಕಾಡೆಮಿ ಅಧ್ಯಕ್ಷರಾದ ಶ್ರೀ ಪಿ.ಸಿ.ಜಯರಾಮ ಇವರು ಅಧ್ಯಕ್ಷತೆ ವಹಿಸಿದ್ದರು. ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಚ್ಯುತ ಗುತ್ತಿಗಾರು, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಶೇಷಪ್ಪ ಹಾಲೆಮಜಲು, ಶ್ರೀ ರವೀಂದ್ರ
ಕೊರಂಬಟ, ಶ್ರೀ ಕುಶಾಲಪ್ಪಗೌಡ ಇವರು ಉಪಸ್ಥಿತರಿದ್ದರು. ಅರೆಭಾಷೆ ಸಂಸ್ಕøತಿಗೆ ಸಂಬಂಧಿಸಿದಂತೆ ಸೋಬಾನೆ ಹಾಡು, ಛದ್ಮವೇಸ, ಅರೆಭಾಸೆ ಹಾಡು, ಅರೆಬಾಸೆ ಚೀಟಿ ಎತ್ತಿ ಅಭಿನಯ ಇತ್ಯಾದಿ
ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು, ಕಾರ್ಯಕ್ರಮದಲ್ಲಿ ಆಟಿ ಕಳಂಜ ಪಾತ್ಯಕ್ಷಿಕೆ, ಅರೆಬಾಸೆ ಸಂಗೀತ ಗೋಷ್ಠಿ ಶ್ರೀ ರಮೇಶ್ ಮೆಟ್ಟಿನಡ್ಕ ಮತ್ತು ಬಳಗದವರಿಂದ ಸಾಂಸ್ಕÀೃತಿಕ ಕಾರ್ಯಕ್ರಮ ನಡೆಯಿತು.

ಅಪರಾಹ್ನ 2.00 ಗಂಟೆಯಿಂದ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಎಸ್.ಕೆ.ಡಿ.ಆರ್.ಡಿ.ಪಿ, ಸುಳ್ಯದ ಯೋಜನಾಧಿಕಾರಿ ಶ್ರೀ ಸಂತೋಷ್ ಕುಮಾರ್ ರೈ ಸಾಹಿತಿಗಳಾದ
ಶ್ರೀಮತಿ ಲಲಿತಾಜ ಮಲ್ಲಾರ, ಗುತ್ತಿಗಾರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಕುಳ್ಳಂಪಾಡಿ ಇವರು ಭಾಗವಹಿಸಿದ್ದರು. ಶ್ರೀ ಮೋನಪ್ಪ ಗೌಡ ಪಂಜಿಪಳ್ಳ, ಶ್ರೀ ಚೆನ್ನಪ್ಪಗೌಡ ಕುಳ್ಳಂಪಾಡಿ, ಶ್ರೀ ಚಿದಾನಂದ ಗೌಡ ಅಂಬೆಕಲ್ಲು, ಶ್ರೀ ರಾಘವಗೌಡ ಹೊಸಮನೆ ಇವರು ಗೌರವ ಉಪಸ್ಥಿತರಿದ್ದರು. ರಂಗ
ಮಯೂರಿ ಕಲಾಶಾಲೆ, ಸುಳ್ಯ ಇವರಿಂದ “ಮಾಯಕ” ನಾಟಕ ನಡೆಯಿತು.
ಭಾಗವಹಿಸಿದ ಆತಿಥಿಗಳಿಗೆ ಹಾಗೂ ಸಹಕರಿಸಿದ ಸಂಘ- ಸಂಸ್ಥೆಗಳ ಪ್ರಮುಖರಿಗೆ ನೆನಪಿನ ಕಾಣಿಕೆಯಾಗಿ ಅಕಾಡೆಮಿ ಪ್ರಕಟಿಸಿದ ಪುಸ್ತಕಗಳನ್ನು ನೀಡಿ ಗೌರವಿಸಲಾಯಿತು. ಅಕಾಡೆಮಿ ಶ್ರೀ ಮಾಧವ ಗೌಡ, ಶ್ರೀಮತಿ ತಿರುಮಲೇಶ್ವರಿ, ಶ್ರೀ ಕೆ.ಟಿ.ವಿಶ್ವನಾಥ, ಶ್ರೀ ಎ.ಕೆ.ಹಿಮಕರ, ಶ್ರೀ ಸುರೇಶ್ ಎಂ.ಹೆಚ್, ಶ್ರೀ
ಕುಂಬುಗೌಡನ ಪ್ರಸನ್ನ, ಶ್ರೀ ಕಾನೆಹಿತ್ಲು ಮೊಣ್ಣಪ್ಪ, ಶ್ರೀ ದಿನೇಶ್ ಹಾಲೆಮಜಲು, ಶ್ರೀ ಪರಶುರಾಮ ಚಿಲ್ತಡ್ಕ, ಶ್ರೀ ಬಾರಿಯಂಡ ಜೋಯಪ್ಪ, ಶ್ರೀಮತಿ ಕಡ್ಲೇರ ತುಳಸಿಮೋಹನ್ ರವರು ಉಪಸ್ಥಿತರಿದ್ದರು. ಬೆಳಿಗ್ಗೆ 9.00 ಗಂಟೆಗೆ ಫ್ರಾರಂಭವಾದ ಕಾರ್ಯಕ್ರಮ ಸಂಜೆ 5.00 ಗಂಟೆಗೆ ಮುಕ್ತಾಯವಾಯಿತು.
News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.