ಅಕಾಡೆಮಿ ಪ್ರಾಯೋಜಿಸಿದ ಕಾರ್ಯಕ್ರಮಗಳು
ಜಿಲ್ಲಾಡಳಿತ, ಕೊಡಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ 31.10.2016 ನೇ ಸೋಮವಾರ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಹುತಾತ್ಮ ದಿನಾಚರಣೆ ಕಾರ್ಯಕ್ರಮವನ್ನು ಕೋಟೆ ಆವರಣ ಮಡಿಕೇರಿ ಇಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 9.30 ಗಂಟೆಗೆ ಗುಡ್ಡೆಮನೆ ಅಪ್ಪಯ್ಯಗೌಡರ ಸ್ಮಾರಕಕ್ಕೆ ಶ್ರೀ ಎಂ.ಆರ್.ಸೀತಾರಾಂ ಇವರು ಪುಷ್ಪಾರ್ಚನೆ ಮಾಡಿದರು. ಶ್ರೀ ಎಂ.ಕೃಷ್ಣಪ್ಪ, ಸನ್ಮಾನ್ಯ ವಸತಿ ಸಚಿವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಮಡಿಕೇರಿ ಕ್ಷೇತ್ರದ ಶ್ರೀ ಮಂಡೇಪಂಡ ಪಿ.ಅಪ್ಪಚ್ಚುರಂಜನ್ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಲೋಕಸಭಾ ಕ್ಷೇತ್ರ ಸಂಸದರಾದ ಶ್ರೀ ಪ್ರತಾಪ ಸಿಂಹ, ಶಾಸಕರಾದ ಶ್ರೀ ಕೊಂಬಾರನ ಜಿ.ಬೋಪಯ್ಯ, ಶ್ರೀ ವಾಸು, ಶ್ರೀ ಎಂ.ಪಿ.ಸುನಿಲ್‍ಸುಬ್ರಮಣಿ, ಶ್ರೀಮತಿ ಶಾಂತೆಯಂಡ ವೀಣಾ ಅಚ್ಚಯ್ಯ, ಡಾ.ಪಿ.ರಾಜೇಂದ್ರ ಪ್ರಸಾದ್, ಶ್ರೀ ಸತೀಶ್ ಕುಮಾರ್, ಶ್ರೀಮತಿ ತೆಕ್ಕಡೆ ಶೋಭ ಮೋಹನ್, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿಶೇಷ ಅಹ್ವಾನಿತರಾಗಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಡಾ.ಅಪ್ಪಾಜಿಗೌಡ, ಗೌಡ ಸಮಾಜಗಳ ಒಕ್ಕೂಟ ಅಧ್ಯಕ್ಷರಾದ ಶ್ರೀ ದಂಬೆಕೋಡಿ ಎಸ್.ಆನಂದ, ಚರಿತ್ರೆಗಾರರು ಮತ್ತು ಸಾಹಿತಿಗಳಾದ ಶ್ರೀ ತಲಕಾಡು ಚಿಕ್ಕರಂಗೇಗೌಡ ಇವರು ಭಾಗವಹಿಸಿದ್ದರು.
ಪ್ರಾರ್ಥನೆ, ಸ್ವಾಗತ, ಉದ್ಘಾಟನಾ ಭಾಷಣ, ಮುಖ್ಯ ಅತಿಥಿಗಳ ಭಾಷಣ, ವಿಚಾರಮಂಡನೆ, ಕವನ ವಾಚನ, ನೃತ್ಯರೂಪಕ,ಲಾವಣಿ ಪದ, ಅಧ್ಯಕ್ಷರ ಭಾಷಣ ವಂದನಾರ್ಪಣೆ ಕಾರ್ಯಕ್ರಮಗಳು ನಡೆಯಿತು. ಮಧ್ಯಾಹ್ನದ ಊಟದ ವ್ಯವಸ್ಥೆನೂ ಮಾಡಲಾಗಿದ್ದು ಅಕಾಡೆಮಿಂದ ಪುಸ್ತಕ ಮಾರಾಟ ಮತ್ತು ಪುಸ್ತಕ ಪ್ರದರ್ಶನ ಇಡಲಾಗಿತ್ತು.
News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.