ಅಕಾಡೆಮಿ ಪ್ರಾಯೋಜಿಸಿದ ಕಾರ್ಯಕ್ರಮಗಳು
ದಿನಾಂಕ 16.10.2016 ರಂದು ಚೆಂಬು ಗ್ರಾಮದ ಸ.ಜಿ.ಪ್ರಾ ಶಾಲಾ ವಠಾರದಲ್ಲಿ ಅರೆಬಾಸೆ ಸಂಸ್ಕøತಿ ಸಿರಿ ಮತ್ತು ಸಾಹಿತ್ಯ ಸುಗ್ಗಿಯ ಕೂಡುಕೂಟ ಕಾರ್ಯಕ್ರಮವನ್ನು ನಡೆಸಲಾಯಿತು.
ಶ್ರೀ ಕೊಂಬಾರನ .ಜಿ.ಬೋಪಯ್ಯ ಶಾಸಕರು, ವಿರಾಜಪೇಟೆ ಕ್ಷೇತ್ರ ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು, ಶ್ರೀ ಕೊಲ್ಯದ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು, ಚೆಂಬು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಮಾಧವ ಪೊಯ್ಯಮಜಲು, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ತೆಕ್ಕಡೆ ಶೋಭ ಮೋಹನ್, ಶ್ರೀ ಎನ್.ಎಸ್.ದೇವಿಪ್ರಸಾದ್, ಮಾಜಿ ಅಧ್ಯಕ್ಷರು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ನಿವೃತ್ತ ಪ್ರಾಂಶುಪಾಲರಾದ ಶ್ರೀ ದಾಮೋದರ್ ಕುಯಿಂತೋಡು, ಶ್ರೀ ವಾಸುದೇವ ಕಾಚೇಲು, ಶ್ರೀ ರಾಧಾಕೃಷ್ಣ ಹೊಸೂರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮನರಂಜನೀಯ ಗ್ರಾಮೀಣ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು,, ಅರೆಬಾಸೆ ಸಂಸ್ಕೃತಿ ಬಿಂಬಿಸುವ ನೃತ್ಯ, ಅರೆಬಾಸಿಕ ಸಾಂಸ್ಕøತಿಕ ಛದ್ಮವೇಸ, ಅರೆಬಾಸೆ ಹಾಡು, ಹಸೆ ಬರೆಯೋದು, ರಸಪ್ರಶ್ನೆ, ಸೋಬಾನೆ, ಅರೆಭಾಷೆ ಪ್ರಬಂಧ ಸ್ಪರ್ಧೆ, ಅರೆಬಾಸೆ ಸ್ವರಚಿತ ಕವನ, ಹಗ್ಗಜಗ್ಗಾಟ ಇವುಗಳು ಮನರಂಜನಿಯವಾಗಿ ನಡೆದವು.
ಅರೆಬಾಷಿಕರ ಚಿಂತನ ಮಂತನ ವಿಷಯದ ಬಗ್ಗೆ ಶ್ರೀ ಗೋಪಾಲ ಪೆರಾಜೆ ಇವರ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿಯನ್ನು ಹಮ್ಮಿಕೊಂಡು ಅರೆಬಾಸೆ ಸಂಸ್ಕøತಿ ಬೆಳವಣಿಗೆಲಿ ಮಹಿಳೆ ವಿಷಯದ ಬಗ್ಗೆ ಶ್ರೀಮತಿ ಸ್ವರ್ಣಕಲ ಕಿಶೋರ್‍ರವರು, ಅರೆಬಾಸಿಕರ ಸಂಪ್ರದಾಯ ಬಗ್ಗೆ ಶ್ರೀ ಬಾರಿಯಂಡ ಜೋಯಪ್ಪ ರವರು ಅರೆಬಾಸಿಕರ ಸಂಸ್ಕೃತಿ ಬೆಳವಣಿಗೆಲಿ ಅರೆಬಾಸೆನ ಪಾತ್ರ ಬಗ್ಗೆ ಶ್ರೀ ಸೂದನ ಈರಪ್ಪ ಇವರು ಉಪನ್ಯಾಸ ಮಾಡಿದರು.
ಅರೆಬಾಸಿಕರ ಮದ್ವೆ ಅಂದ್-ಇಂದ್ ವಿಷಯದ ಬಗ್ಗೆ ಚೌಕಿಲಿ ಅರೆಬಾಸೆ ಪಟ್ಟಾಂಗ ಕಾರ್ಯಕ್ರಮವನ್ನು ಶ್ರೀ ಕಿಶೋರ್ ಕಿರ್ಲಾಯ ಇವರ ಆದ್ಯಕ್ಷತೆಯಲ್ಲಿ ನಡೆಸಲಾಯಿತು. ಶ್ರೀ ಅನಂತ ಎನ್.ಸಿ ನಿಡಿಂಜಿ, ಶ್ರೀ ಸೂರಜ್ ಹೊಸೂರು, ಶ್ರಿ ಸೂರಜ್ ಹೊಸೂರು, ಶ್ರೀ ಕಿಶೋರ್ ಉಳುವಾರು, ಶ್ರೀ ಚಂದ್ರಶೇಖರ ಹೊಸೂರು, ಶ್ರೀ ಭವಾನಿ ಶಂಕರ ಅಡ್ತಲೆ, ಶ್ರೀ ಲೋಕನಾತ್ ಎಸ್.ಪಿ ಪೆಲ್ತಡ್ಕ ಇವರು ಮಾತನಾಡಲು ಭಾಗವಹಿಸಿದ್ದರು.
ಮುಕ್ತಾಯ ಸಮಾರೋಪದಲ್ಲಿ ಶ್ರೀ ನಾಗೇಶ್ ಕುಂದಲ್ಪಾಡಿ,ಶ್ರೀ ಬಾಲದಂದ್ರ ಪಳಗಿ, ಶ್ರೀ ದಿನೇಶ್ ಮಡಪ್ಪಾಡಿ, ಶ್ರೀ ಎಂ.ಬಿ.ಸದಾಶಿವ,ಶ್ರೀ ಎಂ.ಎಂ.ಪಾರ್ವತಿ, ಶ್ರೀ ಜಿ.ವಿ.ಗಣಪಯ್ಯ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶ್ರೀ ಲೋಕೇಶ್ ಊರುಬೈಲ್ ಇವರ ನಿರ್ದೇಶನದ ಅರೆಬಾಸೆ ಕಿರುನಾಟಕ, ಕಿರುರೂಪಕ, ಸಮೂಹ ನೃತ್ಯಗಳು, ಹಾಗೂ ಶ್ರೀ ಚಂದ್ರಶೇಖರ್ ಪೆರಾಜೆ ಇವರಿಂದ ಅರೆಬಾಸೆ ಯಕ್ಷಗಾನ “ಓಂ ನಮ ಶಿವಾಯ”ಯಕ್ಷಗಾನ ನಡೆಯಿತು.
ಸುಮಾರು 500ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು ಅಕಾಡೆಮಿಯಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾಡಲಾಯಿತು. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
News and Events
  1. 2012
  2. 2014
  3. 2015
  4. 2016
  5. 2017
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.