ಅರೆಭಾಷೆ ಸಂಸ್ಕೃತಿಯಲ್ಲಿ ಸಾಂಪ್ರದಾಯಿಕ ಅಡಿಗೆ ತರಬೇತಿ ಕಾರ್ಯಾಗಾರ ಮತ್ತೆ ಪ್ರಾತ್ಯಕ್ಷಿಕೆ - 13.09.2016 , 18.09.2016
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ 13.09.2016 ರಿಂದ 17.09.2016 ರವರೆಗೆ ಮರಗೋಡು ಗೌಡ ಸಮಾಜದಲ್ಲಿ ಅರೆಭಾಷೆ ಸಂಸ್ಕøತಿಯಲ್ಲಿ ಸಾಂಪ್ರದಾಯಿಕ ಅಡಿಗೆ ತರಬೇತಿ ಶಿಬಿರ ಏರ್ಪಡಿಸಿ ದಿನಾಂಕ 18.09.2016 ರಂದು ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಯಿತು. ಶಿಬಿರದಲ್ಲಿ ಹಲವಾರು ಮಹಿಳೆಯರು ಭಾಗವಹಿಸಿ ಅರೆಭಾಷೆ ಸಂಸ್ಕøತಿಯಲ್ಲಿ ಸಾಂಪ್ರದಾಯಿಕ ಅಡಿಗೆ ತರಬೇತಿ ಪಡೆದರು ಹಾಗೂ ಹಬ್ಬಹರಿದಿನಗಳ ಅಡುಗೆಗಳನ್ನು ಮಾಡಿ ಪ್ರದರ್ಶನ ನೀಡಿದರು. ಇವರಿಗೆಲ್ಲಾ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ದಿನಾಂಕ 18.09.2016 ರಂದು ಮರಗೋಡು ಗಣಪತಿ ದೇವಸ್ಥಾನದಿಂದ ಗೌಡ ಸಮಾಜದವರೆಗೆ ಅರೆಭಾಷೆ ಸಂಸ್ಕೃತಿಯನ್ನು ಬಿಂಬಿಸುವ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆ ಉದ್ಘಾಟಕರಾಗಿ ಶ್ರೀ ದೇವಜನ ನಾಣಯ್ಯ, ಅಧ್ಯಕ್ಷರು, ಗೌಡ ಸಮಾಜ, ಮರಗೋಡು, ಮುಖ್ಯ ಅತಿಥಿಗಳಾಗಿ ಶ್ರೀ ಮಳ್ಳಂದಿರ ಲುಸ್ವಾಪತಿ,ಮರಗೋಡು ಇವರನ್ನು ಅಹ್ವಾನಿಸಲಾಗಿತ್ತು.

ಬೆಳಿಗ್ಗೆ 10.00 ಗಂಟೆಗೆ ಸಾಂಪ್ರದಾಯಿಕ ಅಡಿಗೆ ಪ್ರದರ್ಶನವನ್ನು ಉದ್ಘಾಟನೆ ಮಾಡಲಾಗಿ ಶ್ರೀಮತಿ ಅಯ್ಯಂಡ್ರ ಪಾರ್ವತಿ ಪೂಣಚ್ಚ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.


ಬೆಳಿಗ್ಗೆ 10.30 ಗಂಟೆಗೆ ಸಮಾರೋಪ ಸಮಾರಂಭ ಹಮ್ಮಿಕೊಂಡು ಶ್ರೀ ಕೆ.ಜಿ.ಬೋಪಯ್ಯ, ಸನ್ಮಾನ್ಯ ಶಾಸಕರು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಇವರು ಉದ್ಘಾಟಿಸಿದರು. ಶ್ರೀ ಕೊಲ್ಯದ ಗಿರೀಶ್ ಅಕಾಡೆಮಿ ಅಧ್ಯಕ್ಷರು, ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಶ್ರೀಮತಿ ವೀಣಾ ಅಚ್ಚಯ್ಯ, ವಿಧಾನಪರಿಷತ್ ಸದಸ್ಯರು, ಶ್ರೀ ಮಂಡೆಪಂಡ ಸುನಿಲ್ ಸುಬ್ರಮಣಿ, ವಿಧಾನಪರಿಷತ್ ಸದಸ್ಯರು, ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ, ಅಧ್ಯಕ್ಷರು ಕರ್ನಾಟಕ ಸಮಾಜ ಕಲ್ಯಾಣ ಮಂಡಳಿ, ಬೆಂಗಳೂರು, ಕು.ಮಮತಾ ಪಿ.ಎನ್, ಅಧ್ಯಕ್ಷರು ಮರಗೋಡು ಗ್ರಾಮ ಪಂಚಾಯತ್, ಶ್ರೀಮತಿ ಕಲಾವತಿ ಪೂವಪ್ಪ, ಸದಸ್ಯರು, ಕೊಡಗು ಜಿಲ್ಲಾ ಪಂಚಾಯತ್, ಶ್ರೀ ಬಿ.ವೈ ಅಪ್ಪುರವೀಂದ್ರ, ಸದಸ್ಯರು ತಾಲ್ಲೂಕು ಪಂಚಾಯತ್, ಮಡಿಕೇರಿ, ಡಾ. ಕರ್ಣಯ್ಯನ ಎಸ್.ಅಪ್ಪಯ್ಯ ಕೆ.ಎ.ಎಸ್, ನಿವೃತ್ತ ಹೆಚ್ಚುವರಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು, ಶ್ರೀ ಕಾಂಗೀರ ನಂಜುಂಡ, ಉಪಾಧ್ಯಕ್ಷರು, ಭಾರತೀಯ ಎಜುಕೇಷನಲ್ ಸೊಸೈಟಿ, ಮರಗೋಡು ಇವರು ಉಪಸ್ಥಿತರಿದ್ದರು.
ಶ್ರೀ ಪಟ್ಟಡ ಶಿವಕುಮಾರ್, ಉಪನ್ಯಾಸಕರು, ಸ.ಪ.ಪೂ ಕಾಲೇಜು, ಕಾರ್ಯ ಇವರು ಅರೆಭಾಷಿಕರ ಅಡಿಗೆ ಸಂಸ್ಕøತಿಯ ವಿಶ್ಲೇಷಣೆ ಮಾಡಿದರು. ಅರೆಭಾಷೆ ಸಂಸ್ಕøತಿಯನ್ನು ಬಿಂಬಿಸುವಂತ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಇವರಿಗೆ ಸಂಭಾವನೆ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾದ ಈ ಕಾರ್ಯಕ್ರಮ ಸಂಜೆ 5.00ಗಂಟೆಗೆ ಮುಕ್ತಾಯವಾಗಿದ್ದು 1500ಕ್ಕೂ ಮೀರಿ ಸ್ಥಳೀಯರು, ಭಾಷಾಭಿಮಾನಿಗಳು, ಕಲಾವಿದರು ಭಾಗವಹಿಸಿದ್ದರು ಇವರಿಗೆಲ್ಲ ಊಟದ ವ್ಯವಸ್ಥೆ ಮಾಡಲಾಗಿತ್ತು. ಹಾಗೂ ಅಕಾಡೆಮಿಯಿಂದ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಮಾಡಲಾಯಿತು. ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.