ಅಕಾಡೆಮಿ ಪ್ರಾಯೋಜಿಸಿದ ಕಾರ್ಯಕ್ರಮಗಳು
ಸೆಪ್ಟೆಂಬರ್ 10 ಮತ್ತು 11 ರಂದು ವಲ್ಲೀಶ ಸಭಾಭವನ, ಕುಕ್ಕೇ ಸುಬ್ರಹ್ಮಣ್ಯ, ಸುಳ್ಯ ತಾಲೂಕು ಇಲ್ಲಿ ಯುವ ಅರೆಭಾಷೆ ಸಾಹಿತ್ಯ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಾನಪದ ವಿದ್ವಾಂಸರಾದ ಶ್ರೀ ಆನಂದ ಗೌಡ ಪರ್ಲ ಇವರ ಅಧ್ಯಕ್ಷತೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಹಾವಿದ್ಯಾಲಯ ಮತ್ತು ಪದವಿ ಪೂರ್ವ ಕಾಲೇಜು ಇವರಿಂದ ಸಾಹಿತ್ಯ ಗೋಷ್ಠಿ, ಶ್ರೀ ಸುಬ್ರಾಯ ಗೌಡ ಇವರ ಅಧ್ಯಕ್ಷತೆಯಲ್ಲಿ ವಿದ್ಯಾರ್ಥಿಗಳಿಂದ ಕವಿಗೋಷ್ಠಿ, ಸ.ಪ.ಪೂ ಕಾಲೇಜ್ ಕಾರ್ಯ ಇದರ ಉಪನ್ಯಾಸಕರಾದ ಶ್ರೀ ಪಟ್ಟಡ ಶಿವಕುಮಾರ್ ಇವರ ಅಧ್ಯಕ್ಷತೆಯಲ್ಲಿ ಅರೆಭಾಷೆ ಸಂಸ್ಕøತಿ ಬಗ್ಗೆ ವಿಚಾರಗೋಷ್ಠಿ ನಡೆದಿದ್ದು ಶ್ರೀಮತಿ ಚಂದ್ರಮತಿ ಮಹಿಳೆ ಮತ್ತು ಸಮಾಜ , ಶ್ರೀ ಶಶಿಧರ ಪಳಂಗಾಯ ಇವರು ಅರೆಭಾಷೆ ಸಾಂಸ್ಕೃತಿಕ ರಂಗ-ಯುವ ಸಮುದಾಯ ಬಗ್ಗೆ ಉಪನ್ಯಾಸ ಮಾಡಿದರು.
ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳು, ಶ್ರೀ ಚೇತನ್ ಪುರಿಯಾ ಬಳಗ, ಕಡಬ ಇವರಿಂದ “ಅರೆಭಾಷೆ ಜನಾಂಗದ ಹೆಜ್ಜೆಗಳು” ಶ್ರೀ ಶಶಿಧರ ಮಾವಿನಕಟ್ಟಿ, ಶ್ರೀ ಸುಬಾಷ್ ಪಂಜ ಇವರಿಂದ ಅರೆಭಾಷೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.
ದಿನಾಂಕ 10.09.2016 ರಂದು ಹಿರಿಯ ಸಾಹಿತಿಗಳಾದ ಶ್ರೀ ಟಿ.ಜಿ.ಮುಡೂರು ರವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು, ಮುಖ್ಯ ಅತಿಥಿಗಳಾಗಿ ಶ್ರೀ ಎಸ್.ಅಂಗಾಗ್, ಶ್ರೀಮತಿ ಆಶಾ ತಿಮ್ಮಪ್ಪಗೌಡ, ಡಾ|ರಾಜೇಂದ್ರ , ಶ್ರೀ ನಿತ್ಯಾನಂದ ಮುಂಡೋಡಿ,, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀಮತಿ ಸುಶೀಲ ಹೆಚ್, ಶ್ರೀ ದಿನೇಶ್ ಬಿ.ಎನ್, ಶ್ರೀ ಸತೀಶ್ ಕೂಜುಗೋಡು, ಶ್ರೀ ದಿನೇಶ್ ಮಡಪ್ಪಾಡಿ, ಶ್ರೀಮತಿ ರೇಣುಕಾ ಸದಾನಂದ ಜಾಕೆ, ಶ್ರೀಮತಿ ಶ್ರೀಕಾಂತ್ ಮಾವಿನಕಟ್ಟಿ ಇವರು ಉಪಸ್ಥತರಿದ್ದರು.
ದಿನಾಂಕ 11.09.2016 ರಂದು ಮುಕ್ತಾಯ ಸಮರೋಪದಲ್ಲಿ ಶ್ರೀ ಕೊಲ್ಯದ ಗಿರೀಶ್ ಅಧ್ಯಕ್ಷತೆ, ಶ್ರೀಮತಿ ದಿವ್ಯಪ್ರಭ ಚಿಲ್ತಡ್ಕ, ಶ್ರೀ ನಿಂಗಯ್ಯ, ಶ್ರೀ ಮನಮೋಹನ ಮುಡೂರು,ಶ್ರೀ ಬಿ.ವಿಠಲರಾವ್, ಶ್ರೀ ಅಶೋಕ್ ನೆಕ್ರಾಜೆ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು, ಶ್ರೀ ಜಯರಾಂ ದೇರಪ್ಪಜ್ಜನ ಮನೆ, ಶ್ರೀ ಲೋಕೇಶ್ ಬಿ.ಎನ್, ಶ್ರೀಮತಿ ಭಾರತಿ ದಿನೇಶ್ ಇವರು ಉಪಸ್ಥಿತರಿದ್ದರು.
News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.