ಮಿತ್ರ ಯುವಕ ಮಂಡಲ - 24-08-2016
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ 24.08.2016 ನೇ ಬುಧವಾರದಂದು ದ.ಕ.ಜಿಲ್ಲೆಯ, ಸುಳ್ಯ ತಾಲೂಕಿನ ,ಬೆಳ್ಳಾರೆ ಗ್ರಾಮದ ಐತಪ್ಪಗೌಡರವರ ಗದ್ದೆ ಇಲ್ಲಿ ಕೆಸರುಗದ್ದೆ ಕ್ರೀಡೋತ್ಸವ ಮತ್ತು ಸಾಂಪ್ರದಾಯಿಕ ನಾಟಿ ಓಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮವನ್ನು ಬೆಳ್ಳಾರೆ ಗ್ರಾಮ ಗೌಡ ಸಮಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 9.30 ಕ್ಕೆ ಶ್ರೀ ಎಸ್.ಎನ್.ಮನ್ಮಥ, ಸದಸ್ಯರು, ಜಿಲ್ಲಾ ಪಂಚಾಯತ್, ಬೆಳ್ಳಾರೆ ಕ್ಷೇತ್ರ ಇವರು ಸಮಾರಂಭದ ಉದ್ಘಾಟನೆ ಮಾಡಿದರು. ಶ್ರೀಮತಿ ದಿವ್ಯಪ್ರಭಾ ಚಿಲ್ತಡ್ಕ, ಅಧ್ಯಕ್ಷರು, ಕರ್ನಾಟಕ ಸಮಾಜ ಕಲ್ಯಾಣ ಮಂಡಳಿ, ಬೆಂಗಳೂರು ಇವರು ರೈತ ಮಿತ್ರ ಸಲಕರಣೆಗಳ ಪ್ರದರ್ಶನದ ಚಾಲನೆ ನೀಡಿದರು. ಅಕಾಡೆಮಿ ಅಧ್ಯಕ್ಷರಾದ ಶ್ರೀ ಕೊಲ್ಯದ ಗಿರೀಶ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಎಂ. ಮಾಧವ ಗೌಡ, ಉಪಾಧ್ಯಕ್ಷರು, ಗೌಡರ ಯುವ ಸೇವಾ ಸಂಘ (ರಿ) , ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶಕುಂತಳಾ ನಾಗರಾಜ್, ಬೆಳ್ಳಾರೆ ಕ್ಷೇತ್ರ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ನಳಿನಾಕ್ಷಿ, ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಚಂದ್ರಶೇಖರ ಕಾಂತಮಂಗಲ, ಮಹಾಲಿಂಗೇಶ್ವರ ದೇವಸ್ಥಾನ ಬೆಳ್ಳಾರೆ ಮೊಕ್ತೇಸರರು ಆದ ಶ್ರೀ ಸುರೇಶ್ ಕುಮಾರ್ ಶೆಟ್ಟಿ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಗ್ರಾಮೀಣ ಹಾಗೂ ಮನರಂಜನಾ ಕ್ರೀಡೆಗಳಾದ ಕಾಳು ಹೆಕ್ಕುವುದು, ಕೆಸರುಗದ್ದೆ ಓಟ,ನೇಜಿ ತೆಗೆಯುವುದು-ನೆಡುವುದು, ಅಡಿಕೆ ಹಾಳೆಲಿ ಕುಳ್ಳಿರಿಸಿ ಎಳೆಯುವುದು, ಹಗ್ಗ-ಜಗ್ಗಾಟ, ತ್ರೋಬಾಲ್, ವಾಲಿಬಾಲ್, ಮೊಸರು ಕುಡಿಕೆ ಒಡೆಯುವುದು, ಸೋಬಾನೆ ಇವುಗಳನ್ನು ಮಕ್ಕಳು,ಪುರುಷರು., ಮಹಿಳೆಯರಿಗೆ ಏರ್ಪಡಿಸಿದ್ದು ಸ್ಫರ್ಧೆಗಳು ಭಾಗವಹಿಸಿದ್ದರು. ವಿಜೇತರಾದವರಿಗೆ ಗೌರವ ಸಂಭಾವನೆ ನೀಡಿ ಗೌರವಿಸಲಾಯಿತು.

ಸಮಾರೋಪ ಸಮಾರಂಭವನ್ನು ಅಪರಾಹ್ನ 3.00 ಗಂಟೆಗೆ ಇಟ್ಟುಕೊಂಡಿದ್ದು ಮುಖ್ಯ ಅತಿಥಿಗಳಾಗಿ ಶ್ರೀಮತಿ ರಾಜೀವಿ ಆರ್.ರೈ ಅಧ್ಯಕ್ಷರು, ಮಹಿಳಾ ವಿವಿದ್ದೊದ್ದೇಶ ಸಹಕಾರಿ ಸಂಘ ಬೆಳ್ಳಾರೆ, ಶ್ರೀ ದಿನೇಶ್ ಮಡಪ್ಪಾಡಿ, ಅಧ್ಯಕ್ಷರು, ಗೌಡರ ಯುವ ಸೇವಾ ಸಂಘ(ರಿ) ಸುಳ್ಯ, ಶ್ರೀ ಎಂ.ವೆಂಕಪ್ಪಗೌಡ, ನ್ಯಾಯವಾದಿಗಳು, ಶ್ರೀ ಚಂದ್ರಾ ಕೋಲ್ಚಾರ್, ಅಧ್ಯಕ್ಷರು, ಶ್ರೀ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ , ಶ್ರೀ ಉಮೇಶ್ ಕೆ.ಎಂ, ಶ್ರೀ ನವೀನ್ ಕುಮಾರ್ ರೈ, ಶ್ರೀ ಪ್ರದೀಪ್ ಕುಮಾರ್ ರೈ, ಶ್ರೀ ಪೂರ್ಣಿಮಾ, ಶ್ರೀ ಐತಪ್ಪ ಗೌಡ.ಕೆ ಬೆಳ್ಳಾರೆ ಗ್ರಾಮ ಗೌಡ ಸಮಿತಿ ಅಧ್ಯಕ್ಷರು, ಶ್ರೀ ನವೀನ ಗೌಡ ಎಂ, ಸದಸ್ಯರು ಗ್ರಾಮ ಪಂಚಾಯತ್ ಬೆಳ್ಳಾರೆ ಹಾಗೂ ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು.

ಅರೆಭಾಷೆ ಹಾಡು ನೃತ್ಯ, ಸ್ವರಚಿತ ಕವನ ಜಾನಪದ ನೃತ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಅಕಾಡೆಮಿ ಸದಸ್ಯರಾದ ಡಾ ಪೂವಪ್ಪ ಕಣಿಯೂರು ರವರು ನಮ್ಮ ಕೃಷಿ ಬದುಕು ಬಗ್ಗೆ ಮಾತನಾಡಿದರು.

ಬೆಳಿಗ್ಗೆ 9.30 ಗಂಟೆಗೆ ಪ್ರಾರಂಭವಾಗಿ ಸಂಜೆ 7.00 ಗಂಟೆಗೆ ಮುಕ್ತಾಯವಾದ ಈ ಕಾರ್ಯಕ್ರಮದಲ್ಲಿ ಸುಮಾರು 600 ಕ್ಕೂ ಮೀರಿ ಸ್ಥಳೀಯರು ಕಲಾವಿದರು, ಕ್ರೀಡಾಭಿಮಾನಿಗಳು,ಭಾಷಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಎಲ್ಲವರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.