ಅಕಾಡೆಮಿ ಪ್ರಾಯೋಜಿಸಿದ ಕಾರ್ಯಕ್ರಮಗಳು
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ವತಿಯಿಂದ ದಿನಾಂಕ 15.08.2016 ರಂದು ಸುಳ್ಯ ತಾಲೂಕಿನ ಸ.ಉ.ಹಿ.ಪ್ರಾ ಶಾಲೆ ಅಜ್ಜನಗದ್ದೆ ಇಲ್ಲಿ ಗರುಡ ಯುವಕ ಮಂಡಲ (ರಿ) ಚೊಕ್ಕಾಡಿ ಇವರ ಸಹಯೋಗದಲ್ಲಿ ಆಟಿ ಉತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು.
ಬೆಳಿಗ್ಗೆ 9.30 ಗಂಟೆಗೆ ಶ್ರೀಮತಿ ಸೀತಾ ಹೆಚ್, ಅಧ್ಯಕ್ಷರು ಗ್ರಾಮ ಪಂಚಾಯತ್ ಅಮರ ಮುಡ್ನೂರು ಇವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಶ್ರೀ ಕೊಲ್ಯದ ಗಿರೀಶ್ ಅಕಾಡೆಮಿ ಅಧ್ಯಕ್ಷರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಅಜ್ಜನಗದ್ದೆ ಶಾಲೆಯ ಅಧ್ಯಕ್ಷರಾದ ಶ್ರೀ ರವೀಂದ್ರ ಕಜೆ, ಗರುಡ ಯುವಕ ಮಂಡಲದ ಸ್ಥಾಪಕಧ್ಯಕ್ಷರದ ಶ್ರೀ ಶ್ರೀಧರ್ ಕರ್ಮಜೆ, ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷರಾದ ಶ್ರೀ ದೀಪಕ್, ಸುಳ್ಯ ವ್ಯವಸಾಯ ಸೇವಾ ಸಹಕಾರಿ ಸಂಘ ಉಪಾಧ್ಯಕ್ಷರಾದ ಶ್ರೀ ಯಶವಂತ ಗ್ರಾಮಪಂಚಾಯತ್ ಸದಸ್ಯರಾದ ಶ್ರೀ ವೆಂಕಟರಮಣ ಹಾಗೂ ಅಕಾಡೆಮಿ ಸದಸ್ಯರಾದ ಡಾ.ಪೂವಪ್ಪ ಕಣಿಯೂರು, ಶ್ರೀ ಅಣ್ಣಾಜಿ ಗೌಡ, ಶ್ರೀ ಮೋಹನ್ ಸೋನ, ಶ್ರೀ ಬಿ.ಸಿ.ವಸಂತ, ಶ್ರೀ ಮೋಹನ್ ದಾಸ್, ಶ್ರೀ ಯಶವಂತ ಕುಡೆಕಲ್ ಇವರು ಉಪಸ್ಥಿತರಿದ್ದರು.
ಗ್ರಾಮೀಣ/ಮನರಂಜನೆ ಕ್ರೀಡೆಗಳಾದ ತೆಂಗಿನ ಕಾಯಿ ಕುಟ್ಟುವುದು, ನೋಂಡಿ, ಹಗ್ಗಜಗ್ಗಾಟ, ಸೋಗೆ ಓಟ, ಮಕ್ಕಳಿಗೆ ಕಪ್ಪೆ ಜಿಗಿತ, ಬುಗ್ಗೆ ಒಡೆಯುವುದು, ಹುಣಸೆ ಬೀಜ ಹೆಕ್ಕುವುದು, ಕೆಸರು ಓಟ, ತೆಂಗಿನ ಕಾಯಿಗೆ ಗುರಿ ಇಡುವುದು, ಹಲಸಿನಕಾಯಿ ಪಾಸುಮಾಡುವುದು, ದಂಪತಿ ಇಟ್ಟಿಗೆ ನಡಿಗೆ ಇವುಗಳನ್ನು ಏರ್ಪಡಿಸಿದ್ದು ಭಾಗವಹಿಸಿದ ಸ್ಫರ್ಧಿಗಳಿಗೆ ಸಂಭಾವನೆ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮಗಳಾದ ಅರೆಭಾಷೆ ಗಾಯನ, ಅರೆಭಾಷೆ ಜಾನಪದ ನೃತ್ಯ, ಪ್ರಹಸನ ಮುಂತಾದ ಮನೋರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ ಭಾಗವಹಿಸಿದ ಕಲಾವಿದರಿಗೆ ಸಂಭಾವನೆ ನೀಡಿ ಗೌರವಿಸಲಾಯಿತು.
ಶ್ರೀ ಯು.ಸುಬ್ರಾಯ ಗೌಡ ಪ್ರಾಂಶುಪಾಲರು, ಸ.ಪ.ಪೂ ಕಾಲೇಜು ಬೆಳ್ಳಾರೆ ಇವರು ಆಟಿ ಮಹತ್ವ ಬಗ್ಗೆ ವಿಷಯ ಮಂಡನೆ ಮಾಡಿದರು. ಯುವಕ ಮಂಡಲ ಅಧ್ಯಕ್ಷರಾದ ಶ್ರೀ ಮುರುಳಿ ಇವರು ಸ್ವಾಗತಿಸಿ ಅಕಾಡೆಮಿ ಸದಸ್ಯರಾದ ಶ್ರೀ ಬಿ.ಸಿ.ವಸಂತರವರು ವಂದನಾರ್ಪಣೆ ಮಾಡಿದರು. ಶ್ರೀ ಗಣೇಶ್ ಪಿಲಿಕಜೆ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದ ಸಂಚಾಲಕರಾಗಿ ಶ್ರೀ ಯಶವಂತ ಕುಡೆಕಲ್ ಅಕಾಡೆಮಿ ಸದಸ್ಯರು ಕಾರ್ಯನಿರ್ವಹಿಸಿದ್ದರು.
ಬೆಳಿಗ್ಗೆ 9.30 ಗಂಟೆಗೆ ಪ್ರಾರಂಭವಾಗಿ ಸಂಜೆ 6.00 ಗಂಟೆಗೆ ಮುಕ್ತಾಯವಾದ ಈ ಕಾರ್ಯಕ್ರಮದಲ್ಲಿ ಕಲಾವಿದರು, ಭಾಷಾಭಿಮಾನಿಗಳು, ಕ್ರೀಡಾಭಿಮಾನಿಗಳು, ಅತಿಥಿಗಳು ಸ್ಥಳೀಯರು ಸೇರಿ 500ಕ್ಕೂ ಮೀರಿ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಇವರಿಗೆಲ್ಲಾ ಆಟಿ ತಿಂಗಳ ಸಂಪ್ರದಾಯದ ಊಟದ ವ್ಯವಸ್ಥೆನೂ ಮಾಡಲಾಗಿದ್ದು ಕಾರ್ಯಕ್ರಮವು ವಿಜೃಂಬಣೆಯಿಂದ ನಡೆಯಿತು.

News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.