ಅಕಾಡೆಮಿ ಪ್ರಾಯೋಜಿಸಿದ ಕಾರ್ಯಕ್ರಮಗಳು
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ 14.08.2016 ಭಾನುವಾರ ರಂದು ಸುಳ್ಯ ತಾಲೂಕಿನ ದ.ಕ.ಜಿ.ಪ.ಹಿ.ಪ್ರಾ ಶಾಲೆ ಪೈಲಾರು ಇಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಪೈಲಾರು ಶ್ರೀ ಲಕ್ಷ್ಮೀ ಮಹಿಳಾ ಜ್ಞಾನವಿಕಾಸ ಕೇಂದ್ರ ಪೈಲಾರು ಹಾಗೂ ಫ್ರೆಂಡ್ಸ್ ಕ್ಲಬ್ ಪೈಲಾರು (ರಿ) ಇವರ ಆಶ್ರಯದಲ್ಲಿ ಆಟಿ ಸಂಭ್ರಮ 2016 ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನಡೆಸಲಾಯಿತು.

ಬೆಳಿಗ್ಗೆ 9.00 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಮಾಡಿದ್ದು ಉದ್ಘಾಟಕರಾಗಿ ಶ್ರೀ ಪುಟ್ಟಣ್ಣಗೌಡ ನಾಯರ್ ಕಲ್ಲು ಇವರು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಅಕಾಡೆಮಿ ಅಧ್ಯಕ್ಷರಾದ ಶ್ರೀ ಕೊಲ್ಯದ ಗಿರೀಶ್, ಮುಖ್ಯ ಅತಿಥಿಗಳಾಗಿ ಅಮರಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸೀತಾ ಹೆಚ್, ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ಲಿ. ಚೊಕ್ಕಾಡಿ ಇದರ ಮಾಜಿ ಅಧ್ಯಕ್ಷರಾದ ಶ್ರೀ ಹರಿಶ್ಚಂದ್ರ ಮೋಂಟಡ್ಕ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ರಾಧಾಕೃಷ್ಣ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಇದರ ಯೋಜನಾಧಿಕಾರಿಗಳಾದ ಶ್ರೀ ಯುವರಾಜ್ ಜೈನ್, ಶಿಸು ಅಭಿವೃದ್ಧಿ ಮತ್ತು ಕಲ್ಯಾಣ ಇಲಾಖೆ ಮೇಲ್ವಿಚಾರಕರಾದ ಶ್ರೀಮತಿ ಶೈಲಜಾ ದಿನೇಶ್ ಕುಕ್ಕುಜಡ್ಕ, ಪ್ರಗತಿಪರ ಕೃಷಿಕರಾದ ಶ್ರೀ ನಿರಂಜನ ಕೋಡ್ತುಗುಳಿ, ಶಾಲಾಭಿವೃದ್ಧಿ ಅಧ್ಯಕ್ಷರಾದ ಶ್ರೀ ಕೃಷ್ಣ ಪ್ರಸಾದ್ ಸಹಯೋಗ ನೀಡಿದ ಎಲ್ಲಾ ಸಂಘ ಸಂಸ್ಥೆಗಳ ಅದ್ಯಕ್ಷರು ಸದಸ್ಯರು, ಸ್ಥಳೀಯ ನಿವಾಸಿಗಳು, ಭಾಷಾಭಿಮಾನಿಗಳು ಸುಮಾರು, ಅಕಾಡೆಮಿ ಸದಸ್ಯರು ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಗ್ರಾಮೀಣ ಹಾಗೂ ಮನರಂಜನೆ ಕ್ರೀಡೆಗಳಾದ ಲಗೋರಿ, ಮಡಲ್ ಹೆಣಿಯೋದು ಕಾಯಿ ಕುಟ್ಟುವುದು, ಚೆನ್ನೆಮಣೆ, ಕುಂಟಬಿಲ್ಲೆ ಅಂಬುಗಾಯಿ, ನೋಂಡಿ, ಕಲ್ಲಾಟ, ಅಡಿಕೆ ಹಾಳೆಲಿ ಕುಳಿತು ಎಳೆಯುವುದು ಕೆಸರು ಗದ್ದೆ ಓಟ ಇವುಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಜನೆ, ಅರೆಭಾಸೆ ಜಾನಪದ ಹಾಡು ಸ್ಫರ್ಧೆಗಳು ಜಾನಪದ ಸಂಭ್ರಮ ಸಾಂಸ್ಕøತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಭಾಗವಹಿಸಿದ ಸ್ಫರ್ಧಿಗಳಲ್ಲಿ ವಿಜೇತರಾದವರಿಗೆ ಅಕಾಡೆಮಿಯಿಂದ ಸಂಭಾವನೆ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬೆಳಿಗ್ಗೆ 9.00 ಗಂಟೆಗೆ ಪ್ರಾರಂಭವಾಗಿ ಸಂಜೆ 6.30 ಗಂಟೆಗೆ ಮುಕ್ತಾಯವಾದ ಈ ಕಾರ್ಯಕ್ರಮದಲ್ಲಿ ಸ್ಥಳೀಯರು, ಕಲಾವಿದರು, ಅತಿಥಿಗಳು, ಕ್ರೀಡಾಭಿಮಾನಿಗಳೂ, ಭಾಷಾಭಿಮಾನಿಗಳು ಸೇರಿ ಸುಮಾರು 500ಕ್ಕೂ ಮೀರಿ ಜನ ಸೇರಿದ್ದು ಇವರಿಗೆ ಆಟಿ ತಿಂಗಳ ಸಂಪ್ರದಾಯದಂತೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಅಕಾಡೆಮಿ ಸದಸ್ಯರಾದ ಶ್ರೀ ಮದುವೆಗದ್ದೆ ಬೋಜಪ್ಪಗೌಡ ಇವರು ಅರೆಭಾಷೆ ಸಂಸ್ಕøತಿ ಮತ್ತು ಆಟಿನ ಮಹತ್ವ ಬಗ್ಗೆ ವಿಚಾರ ಮಂಡಿಸಿದರು, ಶ್ರೀ ಅಣ್ಣಾಜಿ ಗೌಡ ಅಕಾಡೆಮಿ ಸದಸ್ಯರು ಕಾರ್ಯಕ್ರಮದ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು. ಶ್ರೀಮತಿ ಮಮತಾರವರು ಸ್ವಾಗತಿಸಿ ಕಾಯಕ್ರಮ ನಿರೂಪಣೆ ಮಾಡಿದರು.
News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.