ಅಕಾಡೆಮಿ ಪ್ರಾಯೋಜಿಸಿದ ಕಾರ್ಯಕ್ರಮಗಳು
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ದಿನಾಂಕ 12.08.2016 ರ ಶುಕ್ರವಾರದಂದು ಕೊಡಗುಜಿಲ್ಲೆ, ಮಡಿಕೇರಿ ತಾಲೂಕಿನ ಅವಂದೂರು ಗ್ರಾಮದ ಕಾಳೇರಮ್ಮನ ಅಯ್ಯಣ್ಣನವರ ಗದ್ದೆ ಇಲ್ಲಿ ಕೆಸರುಗದ್ದೆ ಕ್ರೀಡೋತ್ಸವ ಮತ್ತು ಸಾಂಪ್ರದಾಯಿಕ ನಾಟಿ ಓಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀ ಮುದ್ಯನ ಚಂದ್ರಶೇಖರ್ ಅಧ್ಯಕ್ಷರು ಮದೆ ಗ್ರಾಮ ಪಂಚಾಯತ್ ಇವರು ಗ್ರಾಮೀಣ ಕ್ರೀಡೆಗೆ ಚಾಲನೆ ನೀಡಿದರು ಗ್ರಾಮೀಣ ಕ್ರೀಡೆಗಳಾದ ಕಾಳು ಹೆಕ್ಕುವುದು, ಕೆಸರುಗದ್ದೆ ಓಟ,ಎತ್ತುಗಳಲ್ಲಿ ಗದ್ದೆ ಹೂಡುವ ಸ್ಫರ್ಧೆ, ಅಗೆ ತೆಗೆಯುವ ಸ್ಫರ್ಧೆ, ನಾಟಿ ನೆಡುವ ಸ್ಫರ್ಧೆ, ಅಡಿಕೆ ಹಾಳೆಯಲ್ಲಿ ಕುಳ್ಳಿರಿಸಿ ಎಳೆಯುವ ಸ್ಫರ್ಧೆ, ಅಂಬುಗಾಯಿ, ಹಗ್ಗಜಗ್ಗಾಟ, ಥ್ರೋಬಾಲ್ ಆಟ, ವಾಲಿಬಾಲ್ ಆಟ, ಕೃಷ್ಣ ರುಕ್ಮಿಣಿ ಓಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಸ್ಫರ್ಧಿಗಳು ಭಾಗವಹಿಸಿ ಮನರಂಜನೆ ಪಡೆದುಕೊಂಡರು .

ಸಾಂಪ್ರದಾಯಿಕ ಕೃಷಿ ಬಗ್ಗೆ ವಿಚಾರಮಂಡನೆ ಶ್ರೀ ಪಟ್ಟಡ ಶಿವಕುಮಾರ್ ರವರು ಮಾಡಿದರು.


ವಿರಾಜಪೇಟೆ ಕ್ಷೇತ್ರದ ಶಾಸಕರಾದ ಶ್ರೀ ಕೆ.ಜಿ.ಬೋಪಯ್ಯನವರು ಕಾರ್ಯಕ್ರಮದ ಉದ್ಘಾಟನೆ ಮಾಡಿದರು, ವಿಧಾನಪರಿಷತ್ ಸದಸ್ಯರಾದ ಶ್ರೀಮತಿ ವೀಣಾ ಅಚ್ಚಯ್ಯ ಇವರು ಸಾಂಪ್ರದಾಯಿಕ ನಾಟಿ ಓಟ ಚಾಲನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ಶ್ರೀ ಕೊಲ್ಯದ ಗಿರೀಶ್ ಆಕಾಡೆಮಿ ಅಧ್ಯಕ್ಷರು ವಹಿಸಿದ್ದರು. ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ಕೊಡಪಾಲು ಗಣಪತಿ, ಮದೆ ಗ್ರಾಮಪಂಚಾಯತ್ ಸದಸ್ಯರಾದ ಶ್ರೀ ಬೆಳ್ಯನ ರವಿ ಮತ್ತು ಶ್ರೀಮತಿ ಸವಿತ ಆಚಾರ್ಯ, ನಿವೃತ್ತ ಪೊಲೀಸ್ ಅಧಿಕಾರಿ ಚೊಕ್ಕಾಡಿ ಅಪ್ಪಯ್ಯ ಕೊಡಗು ಗೌಡ ಸಮಾಜ ನಿರ್ದೇಶಕರಾದ ಶ್ರೀ ಕಾಳೇರಮ್ಮನ ಪಾಲಾಕ್ಷ, ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷರಾದ ಶ್ರೀ ಹೊಸೂರು ಗಿರಿ, ಹಿರಿಯ ಭತ್ತ ಬೆಳೆಗಾರರಾದ ಶ್ರೀ ದೇವಾಯಿರ ದೇವಯ್ಯ ಇವರು ಉಪಸ್ಥಿತರಿದ್ದರು.


ಕ್ರೀಡೆಯಲ್ಲಿ ಭಾಗಿಯಾಗಿ ವಿಜೇತರಾದವರಿಗೆ ಸಂಭಾವನೆ /ಸ್ಮರಣಿಕೆ ನೀಡಿ ಗೌರವಿಸಲಾಯಿತು ಬೆಳಿಗ್ಗೆ 10.00 ಗಂಟೆಗೆ ಪ್ರಾರಂಭವಾಗಿ ಸಂಜೆ 7.00 ಗಂಟೆÉಗೆ ಮುಕ್ತಾಯವಾದ ಈ ಕಾರ್ಯಕ್ರಮದಲ್ಲಿ ಸುಮಾರು 600 ಕ್ಕೂ ಮೀರಿ ಸ್ಥಳೀಯರು ಕಲಾವಿದರು, ಕ್ರೀಡಾಭಿಮಾನಿಗಳು,ಭಾಷಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಎಲ್ಲವರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.