ಗೌಡ ಸಮುದಾಯ ಭವನ ಸುಳ್ಯ ಇಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಅರೆಭಾಷೆ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ದಿನಾಂಕ - 02.03.2019

ಪ್ರಥಮ ಅರೆಭಾಷೆ ಸಾಹಿತ್ಯ ಸಮ್ಮೇಳನ

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿವತಿಯಿಂದ ದಿನಾಂಕ 02.03.2019 ರಂದು ಸುಳ್ಯ ನಗರದ ಕೋಡಿಯಾಲ್ ಬೈಲ್‍ನಲ್ಲಿರುವ ಗೌಡ ಸಮುದಾಯ ಭವನದಲ್ಲಿ ಪ್ರಪಥಮ ಅರೆಭಾಷೆ ಸಾಹಿತ್ಯ ಸಮ್ಮೇಳನ-2019 ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. Àಮ್ಮೇಳನದ ಅಧ್ಯಕ್ಷತೆ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕರು ಆಗಿರುವ ಶ್ರೀ ಕೆ.ಆರ್.ಗಂಗಾಧರ ರವರು ವಹಿಸಿದ್ದರು.

ಸಮ್ಮೇಳನದ ಮೆರವಣಿಗೆ

ಕೆ.ವಿ.ಜಿ ಸಮುದಾಯ ಭವನ - ಅಮರಶ್ರೀ ಭಾಗ್, ಸುಳ್ಯ ಇಲ್ಲಿಂದ ಸಮ್ಮೇಳನದ ಮೆರವಣಿಗೆಯನ್ನು ಪ್ರಾರಂಭಿಸಲಾಯಿತು. ಡಾ|ರೇಣುಕಾ ಪ್ರಸಾದ್ ಕೆ.ವಿ. ನಿರ್ದೇಶಕರು, ರಾಜ್ಯ ಒಕ್ಕಲಿಗರ ಸಂಘ (ರಿ) ಬೆಂಗಳೂರು ಇವರು ಮೆರವಣಿಗೆ ಉದ್ಘಾಟನೆಯನ್ನು ಮಾಡಿದರು. ಸಮ್ಮೇಳನದ ಅಧ್ಯಕ್ಷರಾದ ರಾಷ್ಟ್ರ ಪ್ರಶಸ್ತಿ ಪುರಸ್ಕøತ ಶಿಕ್ಷಕರು ಶ್ರೀ ಕೆ.ಆರ್.ಗಂಗಾಧರ, ಅಕಾಡೆಮಿ ಅಧ್ಯಕ್ಷರಾದ ಶ್ರೀ ಪಿ.ಸಿ.ಜಯರಾಮ, ಶ್ರೀ ದಿನೇಶ್ ಮಡಪ್ಪಾಡಿ ಇವರು ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹಾಗೆಯೇ ಅಕಾಡೆಮಿ ಸದಸ್ಯರು, ಸ್ವಾಗತ ಸಮಿತಿ ಸದಸ್ಯರು, ಗೌಡರ ಯುವ ಸೇವಾ ಸಂಘ (ರಿ)ಸುಳ್ಯ ಇದರ

ಪದಾಧಿಕಾರಿಗಳೆಲ್ಲರು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರವಣಿಗೆ ಮೂಲಕ ಸಭಾಸ್ಥಳಕ್ಕೆ ಆಗಮಿಸಿದರು.

ಮೆರವಣಿಗೆ ವಿಶೇಷ ಆಕರ್ಷಣೆ

ನಾಸಿಕ್ ಬ್ಯಾಂಡ್, ಅರೆಭಾಷೆ ಸಂಸ್ಕೃತಿಯನ್ನು ಬಿಂಬಿಸುವ ಟ್ಯಾಬ್ಲೋಗಳು, ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ವೇಷಭೂಷಣದಲ್ಲಿ ಕುದುರೆ ಮೇಲೆ ಮೆರವಣಿಗೆ ವಿಶೇಷ ಆಕರ್ಷಣೆಯಾಗಿದ್ದವು.

ರಾಷ್ಟ್ರ ಧ್ವಜಾರೋಹಣ

ಶ್ರೀಮತಿ ಶೀಲಾವತಿ ಮಾಧವ, ಅಧ್ಯಕ್ಷರು, ನಗರ ಪಂಚಾಯತ್ ಸುಳ್ಯ ಇವರು ಸಭಾಂಗಣದ ಮುಂಭಾಗದಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ವಸ್ತು ಪ್ರದರ್ಶನ

ಅರೆಭಾಷೆ ಸಂಸ್ಕøತಿಗೆ ಸಂಬಂದಪಟ್ಟಂತೆ ಹಳೆ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಸಂಗ್ರಹಿಸಿ ವಸ್ತುಪ್ರದರ್ಶನಕ್ಕೆ ಇಡಲಾಗಿತ್ತು. ವಸ್ತುಪ್ರದರ್ಶನದ ಉದ್ಘಾಟನೆಯನ್ನು ಶ್ರೀ ಚನಿಯ ಕಲ್ತಡ್ಕ, ಅಧ್ಯಕ್ಷರು, ತಾಲೂಕು ಪಂಚಾಯತ್, ಸುಳ್ಯ ಇವರು ಮಾಡಿದರು.

ಪುಸ್ತಕ ಪ್ರದರ್ಶನ

ಅಕಾಡೆಮಿ ಪ್ರಕಟಿತ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು, ಶ್ರೀ ಹರೀಶ ಕಂಜಿಪಿಲಿ ಇವರು ಪುಸ್ತಕ ಪ್ರದರ್ಶನದ ಉದ್ಘಾಟನೆ ಮಾಡಿದರು.

ಸಮ್ಮೇಳನ ಉದ್ಘಾಟನಾ ಸಮಾರಂಭ

ಸನ್ಮಾನ್ಯ ಶ್ರೀ ಡಿ.ವಿ.ಸದಾನಂದ ಗೌಡರು ರಾಸಾಯನಿಕ ಗೊಬ್ಬರ ಮತ್ತು ಅಂಕಿ-ಅಂಶಗಳ ಸಚಿವರು, ಭಾರತ ಸರ್ಕಾರ ಇವರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ “ಅರೆಭಾಷೆ ಆಡುಭಾಷೆಯಾಗಿ ಹೆಚ್ಚು ಬೆಳೆಯಬೇಕು, ಭಾಷೆಯ ಬಗ್ಗೆ ಕೀಳರಿಮೆ ಇಟ್ಟುಕೊಳ್ಳದೆ ಹೆಮ್ಮೆಯಿಂದ ಆಡಿದರೆ ಭಾಷೆ ಬೆಳೆಯುತ್ತದೆ.” ಲಿಪಿ ಇದ್ದ ಭಾಷೆ ಮಾತ್ರ ಶ್ರೇಷ್ಠ ಭಾಷೆ ಎಂದಿಲ್ಲ, ಅರೆಭಾಷೆಯಂತಹ ಭಾಷೆಗಳು ನಮ್ಮ ಬದುಕಿನ ಅಡಿಪಾಯ, ತಮ್ಮ ತನವನ್ನು ಜಗತ್ತಿಗೆ ಸಾರುವ ಇಂತಹ ಭಾಷೆಯನ್ನು ಉಳಿಸಬೇಕಾದರೆ ಇದನ್ನು ಆಡುವವರ ಸಂಖ್ಯೆ ಜಾಸ್ತಿಯಾಗಬೇಕು, ಇದಕ್ಕೆ ಪ್ರೇರಣೆ ನೀಡುವ ಕೆಲಸವನ್ನು ನಾವೂ ಮಾಡುತ್ತೇವೆ” ಎಂದು ಸದಾನಂದ ಗೌಡರು ಹೇಳಿದರು. ಸಾಹಿತ್ಯ ಸಮ್ಮೇಳನಗಳು ಭಾಷೆಯ ಬೆಳವಣಿಗೆಗೆ ಅರೆಭಾಷೆಗೆ

ವಿಶೇಷ ಸಂಸ್ಕøತಿ ಇದೆ. ಮಾತೃಭಾಷೆ ಹೃದಯದ ಭಾಷೆಯಾಗಿರುತ್ತದೆ. ಇದು ಹೆಚ್ಚು ಪ್ರಚಲಿತವಾದರೆ ವಿಸ್ತಾರಗೊಳ್ಳುತ್ತದೆ ಅರೆಭಾಷೆಗೆ ತುಂಬಾ ಚರಿತ್ರೆ ಇದೆ ಇದು ಇನ್ನಷ್ಟು ವ್ಯಾಪಕವಾಗಬೇಕು ಎಂದು ಹೇಳಿದರು.

ಅಕಾಡೆಮಿ ಪ್ರಕಟಿಸಿದ ಐದು ಪುಸ್ತಕಗಳ ಬಿಡುಗಡೆ

ಪ್ರೊ.ಕೆ.ಕುಶಾಲಪ್ಪಗೌಡ ಇವರು ಬರೆದ “ಅರೆಬಾಸೆ (ಗೌಡ ಕನ್ನಡ)ವ್ಯಾಕರಣ” ಡಾ.ಪುನೀತ್ ರಾಘವೇಂದ್ರ, ಕುಂಟುಕಾಡ್, ಇವರು ಬರೆದ “ಮಿಣ್ಪುಳಿ” (ಆರೆಬಾಸೆ ಕತೆಗಳ ಜೊಂಪೆ) ಶ್ರೀ ಪಿ.ಜಿ.ಅಂಬೆಕಲ್ಲ್ ಇವರು ಬರೆದ “ತಬ್ಲಿ ಮಂಙ”(ಅರೆಬಾಸೆ ಕತೆಗಳ ಜೊಂಪೆ) ಡಾ. ಕರುಣಾಕರ ನಿಡಿಂಜಿ ಇವರು ಬರೆದ ನೆಗೆಬೇಕು ಕೇದಗೆ ಗೊನೆಹಾಂಗೆ (ಆರೆಬಾಸೆ ಕವನ ಸಂಕಲನ) ಶ್ರೀ ಭವಾನಿಶಂಕರ ಅಡ್ತಲೆ ಇವರು ಬರೆದ ಅಪ್ಪ ಹೇಳ್ದ ಹತ್ತ್ ಕತೆಗ ಈ ಐದು ಪುಸ್ತಕಗಳನ್ನು ಅಕಾಡೆಮಿಯಿಂದ ಪಕಟಿಸಿದ್ದು, ಶ್ರೀ ಎಸ್.ಅಂಗಾರ ಮಾನ್ಯ ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ ಇವರು ಬಿಡುಗಡೆ ಮಾಡಿದರು. ಭಾಷೆಯಿಂದ ಭಾವನೆ ಬೇಕು, ಭಾವನೆ ಹಿಂದೆ ಭಕ್ತಿ ಬೇಕು. ಈ ಹಿನ್ನಲೆಯಲ್ಲಿ ಭಾಷೆಯನ್ನು ಅಥರ್À ಮಾಡಿಕೊಳ್ಳಬೇಕು ಎಂದು ಶ್ರೀ ಅಂಗಾರರವರು ಹೇಳಿದರು.

ವಿಚಾರಗೋಷ್ಠಿ

ಅರೆಭಾಷೆ ಸಾಹಿತ್ಯ ವಿಚಾರಗೊಷ್ಠಿಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ-ಅರೆಭಾಷೆಯವರ ಸ್ಥಿತಿಗತಿಗಳ ಬಗ್ಗೆ ವಕೀಲರು ಮತ್ತು ಸಂಶೋದಕರು ಆದ ಶ್ರೀ ವಿದ್ಯಾಧರ ಬಡ್ಡಡ್ಕ ಇವರು ವಿಚಾರಮಂಡಿಸಿದರು. ಸ್ವಾತಂತ್ರ್ಯ ನಂತರದಲ್ಲಿ - ಅರೆಭಾಷೆನ ಸಂವಿಧಾನದ 8ನೇಪರಿಚ್ಛೇದಕ್ಕೆ ಸೇರ್ಸುವ ವಿಚಾರ ಮತ್ತೆ ಭಾಷಾ ಅಲ್ಪಸಂಖ್ಯಾತರ ಮಾನ್ಯತೆ ಬಗ್ಗೆ ಪ್ರಾಧ್ಯಾಪಕರು ಮತ್ತೆ ಬರಹಗಾರರು ಆದ ಡಾ|ಕರುಣಾಕರ ನಿಡಿಂಜಿ ಇವರು ವಿಚಾರಮಂಡಿಸಿದರು.

ಕಾವ್ಯ ಗಾನ ಕುಂಚ

ಅಪರಾಹ್ನ ನಡೆದ ಕಾವ್ಯ ಗಾನ ಕುಂಚ ಕಾರ್ಯಕ್ರಮದಲ್ಲಿ ಶ್ರೀ ಬಾಬು ಗೌಡ ಅಚ್ಚಲ್ಪಾಡಿ ಶ್ರೀಮತಿ ಸಂಗೀತಾ ರವಿರಾಜ್ ಶ್ರೀ ಉದಯ ಭಾಸ್ಕರ್ ರವರು ಕವನ ವಾಚನ ಮಾಡಿದರು. ಶ್ರೀ ಶಶಿಧರ ಮಾವಿನಕಟ್ಟೆ, ಶ್ರೀಮತಿ ಗಿರಿಜಾ ಎಂ.ವಿ ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ ಶ್ರೀಮತಿ ಮಮತಾ ಪಡ್ಡಂಬೈಲ್ ಶ್ರೀಮತಿ ಕೆ.ಯನ್ ಪುಂಡರಿಕರವರು ಹಾಡು ಹೇಳಿದರು. ಶ್ರೀ ಪ್ರಸನ್ನ ಐವರ್ನಾಡು ಶ್ರೀ ವಸಂತ ಕನ್ನಿಕಾಡಿ ಶ್ರೀ ಅಂಬೆಕಲ್ಲು ಶ್ರೀ ಪ್ರಣಮ್ ನಂಗಾರು ಶ್ರೀಮತಿ ಸಮೀಕ್ಷಾ ಮತ್ತು ಶ್ರೀಮತಿ ಅಭಿಜ್ಞಾ ಕೆ.ಸಿ ಇವರು ಚಿತ್ರ ಬಿಡಿಸಿದರು. ಕಾವ್ಯಗಾನ ಕುಂಚದಲ್ಲಿ ಐದು ಮಂದಿ ಕವಿಗಳು ಕಾವ್ಯವಾಚಿಸಿ ಅದನ್ನು ಗಾಯಕರು ಹಾಡಿ, ಚಿತ್ರಗಾರರು ಚಿತ್ರವನ್ನು ಬಿಡಿಸಿದರು.

ಸಾಂಸ್ಕೃತಿಕ ವೈವಿದ್ಯದಲ್ಲಿ ಅಪರಾಹ್ನ ಅರೆಭಾಷೆ ಪಳಮೆ-ಹಾಸ್ಯ ಲಾಸ್ಯ ಕಾರ್ಯಕ್ರಮ ಬಹಳ ಮನರಂಜನೀಯವಾಗಿ ನಡೆಯಿತು.

ಸಂಜೆ ಅರೆಭಾಷೆ ಸಾಂಸ್ಕøತಿಕ ವೈಭವದಲ್ಲಿ ಕಲಾಬಳಗ ಮಡಿಕೇರಿ ಇವರಿಂದ ವೀರ ಚರಿತ್ರೆ ಮತ್ತು ಕೊಲ್ಲಮೊಗ್ರ ತಂಡದಿಂದ ಸಿದ್ದವೇಷ ಕಾರ್ಯಕ್ರಮ ನಡೆಯಿತು.

ಅರೆಭಾಷೆ ಸಮ್ಮೇಳನಕ್ಕೆ ಸುಮಾರು ಒಂದೂ ಸಾವಿರದ ಐದುನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು ಭಾಗವಹಿಸಿದ ಎಲ್ಲವರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಸಮ್ಮೇಳನದ ಅಹ್ವಾನ ಪತ್ರಿಕೆ ಬಿಡುಗಡೆ ಸಮ್ಮೇಳನದ ಮೆರವಣಿಗೆ ಸಭಾ ಕಾರ್ಯಕ್ರಮದ ಉದ್ಘಾಟನೆ
ಸನ್ಮಾನ್ಯ ಶ್ರೀ ಡಿ.ವಿ.ಸದಾನಂದ ಗೌಡರು ರಾಸಾಯನಿಕ ಗೊಬ್ಬರ ಮತ್ತು ಅಂಕಿ-ಅಂಶಗಳ ಸಚಿವರು, ಭಾರತ ಸರ್ಕಾರ ಇವರ ಭಾಷಣ
News and Events
Home   |   About Arebhashe Academy   |   Events   |   Culture   |   Gallery   |   Contact Us
ęCopyright 2014. Karnataka Arebhashe Academy. All rights reserved.