Karnataka arebhashe academy logo
ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ
ವಿವಿದೆಡೆಯಲ್ಲಿ ಏಕತೆನ ಹೊಂದಿರುವ ಭಾರತ ದೇಶಲಿ ಬ್ಯಾರೆ ಬ್ಯಾರೆ ತರದ ಜಾತಿ ಜನಾಂಗ ಧರ್ಮದವ್ ಒಳೋ.ಒಂದೊಂದು ಜಾತಿ,ಜನಾಂಗಕ್ಕೆ ಅದರದೇ ಆದ ಭಾಷೆ ಸಂಸ್ಕೃತಿ ಪದ್ದತಿ ಉಟ್ಟು.ಅಂತಹದರಲ್ಲಿ ಕೊಡಗ್ ಮತ್ತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿರವ ಅರೆಭಾಶೆ ಜನಾಂಗ ಜನಾಂಗದ ಅರೆಭಾಷೆ ಸಂಸ್ಕೃತಿ,ಪದ್ದತಿ,ಆಚಾರ-ವಿಚಾರಗ ವಿಶೇಷ ಆಗಿಟ್ಟು..
ಶತಮಾನದಷ್ಟ್ ಹಳೆಯದಾಗಿರವ,ಇತಿಹಾಸ ಇರ್ವ ಅರೆಭಾಷೆ ಸಂಸ್ಕೃತಿ ಸಿರಿವಂತ ಸಂಸ್ಕೃತಿ,ಕನ್ನಡ ಪ್ರಬೇಧ(ಅರೆಭಾಷೆ) ಲಿಂಗವಚನ ವ್ಯವಸ್ಥೆ ಉತ್ತರ ಡ್ರಾವಿಡ ವಿಭಾಗದ ನಂತರದ ಹಂತಕ್ಕೆ ಸೇರುಟ್ಟುತಾ ಹೇಳ್ವೆ.ಪೂರ್ವವಲಯದ ಅರೆಭಾಶೆ ಜನಾಂಗರ ಕನ್ನಡದ ಒಂದ್ ಪ್ರಭೇದನೇ ಅಂತ ಮಾತಾಡ್ವೇ...
ದಕ್ಷಿಣ ಕನ್ನಡನಜಿಲ್ಲೆನ ಸಂಸ್ಕೃತಿ ಮತ್ತೆ ಕೊಡಗಿನ ಸಂಸ್ಕೃತಿ ಆಚರಣೆಯಲ್ಲಿ ವಿಭಿನ್ನತೆ ಉಟ್ಟು,ಅಲ್ಲಿ ಭೂತಾರಾಧನೆ,ಸುಗ್ಗಿ ಹಬ್ಬ ನಡೆಸಿವೆ,ಆದರೆ ಕೊಡಗ್ ಅರೆಭಾಶೆ ಜನಾಂಗರ ಸಂಸ್ಕೃತಿ ವೀಶೇಷದ್ದೇ.ಭಾಷೆ,ಸಂಗೀತ,ಕೊಣ್ತ,ಬಟ್ಟೆ,ಬಂಗಾರ,ಆಚಾರ ಎಲ್ಲಾ ವಿಭಿನ್ನ.ಕೊಡಗಿನವರ ಪಾಲಿಗೆ ಈ ಆಚಾರಗಳ್ ಬಂದದ್ ರಾಜವಂಶಸ್ತರಿಂದ.ಕೊಡಗಿನ ವೀರತನಕ್ಕಾಗಿ ಕೊಟ್ಟ ಒಡಿಕತ್ತಿ ಮತ್ತೆ ಕೋವಿ ಜನಾಂಗದ ಹೆಗ್ಗುರುತು.
ಹೇಸರೇ ಹೇಳುವಂತೆ ಅರೆಭಾಶೆ ಜನಾಂಗತೇಳ್ರೆ ಭೂಮಿಯ ಒಡೆಯ. ಅರೆಭಾಶೆ ಜನಾಂಗದವ್ ಎಲ್ಲಿಂದ ಬಂದವ್ ತಾ ಹೇಳಿಕೆ ಎಲ್ಲಿಯೂ ಸನಾ ಸರಿಯಾದ ಮಾಹಿತಿ ಇಲ್ಲೆ.ಆದರೆ ವಿಜಯನಗರ ಸಾಮ್ರಾಜ್ಯಲಿ,ಕೃಷ್ಣದೇವರಾಯ ಕಾಲಲ್ಲೇ ಅರೆಭಾಶೆ ಜನಾಂಗರ್ಗ ಇದ್ದೋ ತಾ ಚರಿತ್ರೆಯಿಂದ ತಿಳಿದು ಬಂದದೆ.
ಅಲ್ಲಿಂದ ಐಗೂರು ಸೀಮೆಗಾಗಿ ದಕ್ಷಿಣಕನ್ನಡ ಜಿಲ್ಲೆಲಿ ಹೆಚ್ಚಾಗಿದ್ದ ಅರೆಭಾಶೆ ಜನಾಂಗವ್ರುನ ಕೊಡಗನ್ನು ಆಳ್ತ ಇದ್ದ ಹಾಲೇರಿ ರಾಜ ವಂಶಸ್ತದವು ಕರ್ಕಂಡ್ ಬಂದ್ ಇಲ್ಲಿ ಭೂಮಿನ ಉಂಬಳಿಯಾಗಿ ಜಮ್ಮಾತೇಳಿ ಕೊಟ್ ನೆಲಿಸಿಕೆ ಅವಕಾಶಮಾಡಿಕೊಟ್ಟಿರುವ ಬಗ್ಗೆ ಇತಿಹಾಸದಲ್ಲಿ ದಾಖಲೆ ಉಟ್ಟು.ಈ ಹಿನ್ನಲೆಯಲ್ಲಿ ಸಣ್ಣ ಜಿಲ್ಲೆ ಕೊಡಗ್ ಸೇರ್ದಂಗೆ ಎಲ್ಲಾ ಕಡೆಲೂ ಅರೆಭಾಶೆ ಜನಾಂಗದವು ಒಳೋ..
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ
ವಿವಿದತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶದಲ್ಲಿ ವಿಭಿನ್ನವಾದ ಜಾತಿ ಜನಾಂಗ ಧರ್ಮದವರು ಇದ್ದಾರೆ.ಒಂದೊಂದು ಜನಾಂಗಕ್ಕೂ ತನ್ನದೇ ಆದ ಭಾಷೆ ಸಂಸ್ಕೃತಿ ಪದ್ದತಿ ಇದೆ.ಅಂತಹದರಲ್ಲಿ ಕೊಡಗು ಮತ್ತು ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಅರೆಭಾಷೆ ಜನಾಂಗ,ಜನಾಂಗದ ಅರೆಭಾಷೆ ಸಂಸ್ಕೃತಿ,ಆಚಾರವಿಚಾರ,ಆಹಾರ ಪದ್ದತಿಗಳು ವಿಭಿನ್ನವೇ ಆಗಿದೆ.

ಶತಮಾನದಷ್ಟು ಹಳೆಯದಾಗಿರುವ ಈ ಅರೆಭಾಷೆ,ಐತಿಹಾಸಕವಾಗಿ ಸಿರವಂತ ಸಂಸ್ಕೃತಿ ಹೊಂದಿದೆ.ಕನ್ನಡ ಪ್ರಭೇದ ಲಿಂಗವಚನ ವ್ಯವಸ್ಥೆಯ ಉತ್ತರ ಡ್ರಾವಿಡ ವಿಭಾಗದ ನಂತರದ ಹಂತಕ್ಕೆ ಸೇರಿದ್ದಾಗಿದೆ ಎನ್ನಲಾಗುತ್ತದೆ.ಪೂರ್ವವಲಯದ ಅರೆಭಾಷೆ ಜನಾಂಗ ಕನ್ನಡಿಗರ ಒಂದು ಭಾಗ ಎಂದು ಪರಿಗಣಿಸಲಾಗುತ್ತದೆ.

ಅರೆಭಾಷೆ ಜನಾಂಗದವರು ಹೆಚ್ಚಾಗಿ ವಾಸಿಸುವ ದಕ್ಷಣ ಕನ್ನಡ ಜಿಲ್ಲೆಯವರಿಗೂ ಕೊಡಗಿನವರ ಸಂಸ್ಕೃತಿ ಆಚರಣೆಯಲ್ಲಿ ವಿಭಿನ್ನತೆ ಇವೆ.ದಕ್ಷಿಣಕನ್ನಡದಲ್ಲಿ ಭೂತಾರಾಧನೆ,ಸುಗ್ಗಿ ಹಬ್ಬ ಆಚರಿಸಿಕೊಂಡು ಬಂದಿದ್ದಾರೆ.ಆದರೆ ಕೊಡಗಿನಲ್ಲಿ ಹುತ್ತರಿ,ಕೈಲುಮುಹೂರ್ತ ಮತ್ತು ಆಟಿ ಹಬ್ಬವನ್ನು ಆಚರಿಸಿಕೊಂಡು ಬಂದಿದ್ದಾರೆ.ಕೊಡಗಿನ ಅರೆಭಾಷೆ ಜನಾಂಗದವರ ಸಂಸ್ಕೃತಿ ವಿಶೇಷವೇ,ಭಾಷೆ ಸಂಗೀತ,ಕುಣಿತ,ವೇಶಭೂಷಣ ಎಲ್ಲವೂ ವಿಭಿನ್ನ.ರಾಜವಂಶಸ್ಥರಿಂದ ಬಂದಿರುವಂತಹದಾಗಿದ್ದು,ವೀರತನದ ಹೆಗ್ಗುರುತಾಗಿ ಕೋವಿ ಮತ್ತೊ ಒಡಿಕತ್ತಿ(ಸಾಂಪ್ರದಾಯಿಕ ಕತ್ತಿ,ಇದೀಗ ಆಭರಣ)ವಾಗಿ ಬಳಸುತ್ತಾರೆ.
ಹಸೆರೇ ಹೇಳುಂತೆ ಅರೆಭಾಷೆ ಜನಾಂಗ ಅಂದ್ರೆ ಭೂಮಿಯ ಒಡೆಯ.ಅರೆಭಾಷೆ ಜನಾಂಗದವರು ಎಲ್ಲಿಂದ ಬಂದರೂ ಎನ್ನುವುದಕ್ಕೆ ಉದಾಹರಣೆಗಳಿಲ್ಲ.ಆದರೆ ವಿಜಯನಗರರ ಅರಸರ ಕಾಲದಲ್ಲಿ,ಕೃಷ್ಣದೇವರಾಯರ ಕಾಲದಲ್ಲಿ ಅರೆಭಾಷೆ ಜನಾಂಗದವರು ಇದ್ದರೂ ಎಂದು ಚರಿತ್ರೆಯಿಂದ ತಿಳಿದುಬರುತ್ತದೆ.
ಅಲ್ಲಿಂದ ಐಗೂರು ಸೀಮೆ ಮೂಲಕ ದಕ್ಷಿಣಕನ್ನಡ ಜಿಲ್ಲೆಗೆ ಬಂದವರು,ಬಳಿಕ ಕೊಡಗು ಜಿಲ್ಲೆಯಲ್ಲಿ ಆಳುತ್ತಿದ್ದ ಹಾಲೇರಿ ರಾಜವಂಶಸ್ಥದವರು ಇಲ್ಲನ ಉಂಬಳಿಗಾಗಿ ಜಮ್ಮಾದ ಮೂಲಕ ಕೊಟ್ಟು ಇಲ್ಲಿ ನೆಲೆಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವ ದಾಖಲೆಗಳು ಇತಿಹಾಸದಿಂದ ತಿಳಿದು ಬರುತ್ತದೆ.ಈ ಹಿನ್ನಲೆಯಲ್ಲಿ ಈ ಪುಟ್ಟ ಜಿಲ್ಲೆಯ ಎಲ್ಲಾ ಭಾಗದಲ್ಲಿ ಅರೆಭಾಷೆ ಜನಾಂಗದವರು ಕಾಣಸಿಗುತ್ತಾರೆ.

ಅರೆಭಾಷೆ ಜನಾಂಗ
ವಿಶೇಷವಾಗಿರುವ ಅರೆಭಾಷೆ ಜನಾಂಗದ ಸಾಹಿತ್ಯ,ಸಂಸ್ಕೃತಿ ಉಳಿಸಿ ಬೆಳೆಸುವುದಕ್ಕೆಆಗಿ 2012ರ ಇಸವಿ ಮೇ 25ರಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿಯನ್ನು ಸ್ತಾಪಿಸಿ,ಪುಸ್ತಕ,ಪದಕೋಶ,ಭಾಷಾಂತರ,ದಾಖಲೆಗಳನ್ನು ಸಂಗ್ರಹಿಸುವ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ.
ಇವುಗಳೊಂದಿಗೆ ಯುವಕರ ಸಬಲೀಕರಣಕ್ಕಾಗಿ ಯುವ ಸಾಹಿತಿಗಳಿಗೆ ವಿಚಾರ ಸಂಕಿರ್ಣ,ಸಾಹಿತ್ಯ ಶಿಬಿರ,ಕವಿಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ.ಭಾಷೆ ಸಂಸ್ಕೃತಿ ನಶಿಸಿದಂತೆ ದಾಖಲೆ ರೂಪದಲ್ಲಿ ಸಂಗ್ರಹ ಮಾಡುವ ಕೆಲಸವನ್ನೂ ಅಕಾಡೆಮಿ ಮಾಡುತ್ತಿದೆ.
News and Events
  1. Upcoming Events
  2. 2012
  3. 2014
  4. 2015
  5. 2016
  6. 2017
  7. 2018
  8. 2019
ಗೌರವ ಪ್ರಶಸ್ತಿ ಅರ್ಜಿ
Related Sites
  1. ಕನ್ನಡ ಮತ್ತು ಸಂಸ್ಕತಿ ನಿರ್ದೇಶನಾಲಯ
  2. ಕರ್ನಾಟಕ ಸರ್ಕಾರ
ಅಕಾಡೆಮಿ ತ್ರೈಮಾಸಿಕ ಸಂಚಿಕೆ "ಹಿಂಗಾರ "
Arebhashe book, Hingara book gowdas
Famous Personalities
gowda academy, gowda famous personalities gowda academy, gowda famous personalities gowda academy, gowda famous personalities, medappa, madikeri medappa gowda gowda academy, gowda famous personalities, medappa, madikeri medappa gowda
ಶ್ರೀ ಕೊಡಿ ಕುಶಲಪ್ಪ ಗೌಡ
- ಸಾಹಿತಿ
ಶ್ರೀ ಚಿದನಂದ ಗೌಡ ಶ್ರೀ ವಿದ್ವಾನ್ ಕೊಲಂಬೆ
ಪುಟ್ಟಣ್ಣ ಗೌಡ
ಶ್ರೀ ಕುಂಭ ಗೌಡನ
ಕುಶಾಲಪ್ಪನವರು
ಕವಿ
ಶ್ರೀ ಬಂದನ ರಾಜ್ ರಾಜ್
ಚಂಗಪ್ಪ
ಶ್ರೀ ಡಾ. ಬಿಲಿಮಲೆ
- ಸಾಹಿತಿ
Home   |   About Arebhashe Academy   |   Events   |   Culture   |   Gallery   |   Contact Us
©Copyright 2015. Karnataka Arebhashe Academy. All rights reserved.